ಪಂಚ ರಾಜ್ಯ ಚುನಾವಣೆ: ಯಾವ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ? ಇಲ್ಲಿದೆ ಮಾಹಿತಿ

Prasthutha|

ಲಕ್ನೋ: ಪಂಚರಾಜ್ಯಗಳ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಯಾವ ಪಕ್ಷಗಳು ಅಧಿಕಾರದತ್ತ ದಾಪುಗಾಲು ಇಡುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರದತ್ತ ಮುನ್ನಡೆಯುತ್ತಿದ್ದು, ಚುನಾವಣಾ ಆಯೋಗದ ವೆಬ್ ಸೈಟ್ ನ ಮಾಹಿತಿ ಪ್ರಕಾರ, ಬಿಜೆಪಿ 188 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು,ಸಮಾವಾದಿ ಪಕ್ಷ 88 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಬಿಎಸ್ ಪಿ ನಾಲ್ಕು, ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಮುಂಚೂಣಿಯಲ್ಲಿದ್ದು, ಆಡಳಿತಾರೂಢ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ನ್ನು ಆಪ್ ಪಕ್ಷ ತಲುಪುವತ್ತ ಮುನ್ನಡೆದಿದೆ. ಎಎಪಿ 88ರಲ್ಲಿ, ಕಾಂಗ್ರೆಸ್ 13ರಲ್ಲಿ, ಶಿರೋಮಣಿ ಅಕಾಲಿದಳ 8ರಲ್ಲಿ ಮುನ್ನಡೆಯಲ್ಲಿದೆ.
ಗೋವಾದಲ್ಲಿ ಬಿಜೆಪಿ 18, ಕಾಂಗ್ರೆಸ್ 12, ಎಎಪಿ 1, ಮಹಾರಾಷ್ಟ್ರವಾದಿ ಗೋಮಾಂತಕ್ 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಮಣಿಪುರದಲ್ಲಿ ಬಿಜೆಪಿ 12, ಕಾಂಗ್ರೆಸ್ 5, ನಾಗಾ ಪೀಪಲ್ಸ್ ಫ್ರಂಟ್ 5, ಜೆಡಿಯು 5ರಲ್ಲಿ ಮುನ್ನಡೆಯಲ್ಲಿದೆ.
ಉತ್ತರಾಖಂಡದಲ್ಲಿ ಬಿಜೆಪಿ 39, ಕಾಂಗ್ರೆಸ್ 17, ಬಿಎಸ್ ಪಿ 2 ಕ್ಷೇತ್ರಗಳಲ್ಲಿ ಮುನ್ನಡೆಯಲಿದೆ.

Join Whatsapp