5,785 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ ಅಭ್ಯರ್ಥಿ!

Prasthutha|

ಅಮರಾವತಿ: ಆಂಧ್ರಪ್ರದೇಶದ ಗುಂಟೂರು ಟಿಡಿಪಿ ಅಭ್ಯರ್ಥಿ ಪೆಮ್ಮಸಾಮಿ ಚಂದ್ರಶೇಖರ್ ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು, ಅವರು ಬರೋಬ್ಬರಿ 5,785 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

- Advertisement -

ನಾಮಪತ್ರ ಸಲ್ಲಿಕೆಗೆ ಕೊನೆಯ‌ದಿನವಾದ ಇಂದು ಅವರು ಭಾರಿ ಮೆರವಣಿಗೆ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ. ಪೆಮ್ಮಸಾಮಿ ಚಂದ್ರಶೇಖರ್ ಅನಿವಾಸಿ ಭಾರತೀಯನಾಗಿದ್ದು, ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.. ಇವರ ಮೂಲ ಗುಂಟೂರು ಜಿಲ್ಲೆಯ ಬುರ್ರಿಪೊಲಂ. ಈಗ ಅಮೆರಿಕದಲ್ಲಿ‌ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕದಲ್ಲಿ‌ ಹೆಚ್ಚಿನ ಆಸ್ತಿ ಅವರು ಹೊಂದಿದ್ದಾರೆ..

ಆಂಧ್ರಪ್ರದೇಶದಲ್ಲಿ ಮೇ 13 ರಂದು ನಾಲ್ಕನೇ ಹಂತದಲ್ಲಿ ವಿಧಾನಸಭೆ ಹಾಗೂ ಲೋಕಸಭೆಯ 25 ಸ್ಥಾನಗಳಿಗೆ ಮತದಾನ ನಡೆಯಲಿದೆ.

Join Whatsapp