ಸೌದಿ ಅರೇಬಿಯ: ಜಿದ್ದಾದಲ್ಲಿ 57 ಇಸ್ಲಾಂ ರಾಷ್ಟ್ರಗಳ ಒಐಸಿ ಒಕ್ಕೂಟದ ಸಭೆ ನಡೆದಿದ್ದು,ಈ ಕೂಡಲೇ ಇಸ್ರೇಲ್ ಯುದ್ಧ ಭೂಮಿಯಿಂದ ಹೊರ ನಡೆಯಬೇಕೆಂದು ಒಮ್ಮತದ ನಿರ್ಧಾರ ಕೈಗೊಂಡಿವೆ. ಇಸ್ರೇಲ್ ಗಾಝಾದಿಂದ ಹಿಂದೆ ಸರಿಯದೇ ಇದ್ದಲ್ಲಿ ಇಸ್ರೇಲ್ ನೊಂದಿಗೆ ರಾಜತಾಂತ್ರಿಕ ವ್ಯವಹಾರಕ್ಕೆ ಬ್ರೇಕ್ ಹಾಕುವ , ತೈಲದಿಂದ ಹಿಡಿದು ಎಲ್ಲಾ ವ್ಯವಹಾರ ಸ್ಥಗಿತಗೊಳಿಸುವ ಸಾಧ್ಯತೆಯನ್ನು ಆಲೋಚಿಸಿದೆ.
ಇನ್ನೊಂದೆಡೆ ಇಸ್ರೇಲ್‌ಗೆ ಬಂದಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಬೆಂಜಮಿನ್ ನೆತನ್ಯಾಹೋ ಜತೆ ಮಾತುಕತೆ ಬಳಿಕ ಜೊರ್ಡಾನ್‌ಗೆ ಹೋಗಬೇಕಿತ್ತು. ಆದ್ರೆ ಇದೇ ಗಾಝಾದ ಆಸ್ಪತ್ರೆ ದಾಳಿ ಮುಂದಿಟ್ಟುಕೊಂಡು ಮುಸ್ಲಿಂ ರಾಷ್ಟ್ರಗಳು ಆ ಸಭೆಯನ್ನು ರದ್ದುಗೊಳಿಸಿದ್ದವು. ಅಮೆರಿಕಕ್ಕೆ ನಿರ್ಗಮನದ ಬಳಿಕ ಜೋ ಬೈಡೆನ್, ಗಾಝಾ ನಿರಾಶ್ರಿತರ ಪರವಾಗಿ ಅನುಕಂಪ ತೋರಿಸಿದ್ದು, 100 ಮಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ.