ಉತ್ತರ ಪ್ರದೇಶದಲ್ಲಿ 5 ಲಕ್ಷ ಸರ್ಕಾರಿ ಹುದ್ದೆ ಖಾಲಿ: ಕುಂಟುತ್ತಿರುವ ಶಿಕ್ಷಣ ವ್ಯವಸ್ಥೆ

Prasthutha|

ಲಕ್ನೋ: ಹಿಂದೆಂದೂ ಕಾಣದ ಪಾರದರ್ಶಕ ಯಶಸ್ವಿ ಕಾನೂನು ಸುವ್ಯವಸ್ಥೆಯ ಆಡಳಿತ ನೀಡಿದ್ದೇನೆ, ನೇಮಕಾತಿ ನಡೆಸಿದ್ದೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆದರೆ ಏಪ್ರಿಲ್ 1, 2019ರ ಸರಕಾರೀ ಮಾಹಿತಿಯಂತೆ ರಾಜ್ಯದ ಸರಕಾರಿ ಇಲಾಖೆಗಳಲ್ಲಿ 3.25 ಲಕ್ಷ ಖಾಲಿ ಹುದ್ದೆಗಳನ್ನು ತುಂಬಿಲ್ಲ. ಪೊಲೀಸ್ ಇಲಾಖೆಯಲ್ಲಿ 12.64 ಹುದ್ದೆಗಳಿದ್ದು ಎಲ್ಲವೂ ಭರ್ತಿಯಾಗಿಲ್ಲ. ಹಾಗೆಯೇ ಶಿಕ್ಷಕ ಹುದ್ದೆಗಳನ್ನು ಕೂಡ ತುಂಬಿಲ್ಲ. ತುಂಬದ ಹುದ್ದೆಗಳ ಒಟ್ಟು ಸಂಖ್ಯೆ 5 ಲಕ್ಷಕ್ಕಿಂತ ಹೆಚ್ಚು.
ಮೂಲಭೂತ ಶಿಕ್ಷಣ ವಿಭಾಗದಲ್ಲಿ 69,000 ಶಿಕ್ಷಕರ ನೇಮಕಾತಿ ಕಾರ್ಯ ಆರಂಭಿಸಲಾಗಿದೆ. ಪ್ರೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರ ಕೂಡ ಕುಂಟುತ್ತಾ ಸಾಗಿದೆ. ಇನ್ನು ಪ್ರಾಥಮಿಕ ಶಾಲೆಗಳ 4.12 ಲಕ್ಷ ಶಿಕ್ಷಕ ಹುದ್ದೆಗಳಲ್ಲಿ 1.8 ಲಕ್ಷ ಹುದ್ದೆಗಳು ಖಾಲಿ ಇವೆ.
ಸರಕಾರೀ ಅನುದಾನದ ಪರಿಷತ್ ಶಾಲೆಗಳಲ್ಲಿ 4,500 ಶಿಕ್ಷಕರ ಮತ್ತು 1,500 ಗುಮಾಸ್ತ ಹುದ್ದೆಗಳು ಬರಿದಾಗಿವೆ. ಪ್ರೌಢ ಶಾಲೆಗಳಲ್ಲಿ ಅನುದಾನಿತ ಶಾಲೆಗಳಲ್ಲಿ 32,000 ಮತ್ತು ಸರಕಾರಿ ಶಾಲೆಗಳಲ್ಲಿ 6,000 ಶಿಕ್ಷಕ ಹುದ್ದೆಗಳನ್ನು ತುಂಬಿಲ್ಲ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನುದಾನಿತ ಹಾಗೂ ಸರಕಾರೀ ಕಾಲೇಜುಗಳಲ್ಲಿ 8,000 ಹುದ್ದೆಗಳು ಭರ್ತಿಯಾಗಿಲ್ಲ.
ಉತ್ತರ ಪ್ರದೇಶದಲ್ಲಿ ಇರಬೇಕಾದ ಪೊಲೀಸ್ ಬಲ 4,15,315. ಇದರಲ್ಲಿ 1,40,105 ಹುದ್ದೆಗಳನ್ನು ತುಂಬದೆ ಬಿಡಲಾಗಿದೆ. ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳು ಇದರಲ್ಲಿ ಸೇರಿಲ್ಲ. ಸಾರ್ವಜನಿಕ ಸಂಸ್ಥೆಗಳಲ್ಲಿ 97,163 ಮತ್ತು ಅನುದಾನಿತ ಸಾರ್ವಜನಿಕ ಸಂಸ್ಥೆಗಳಲ್ಲಿ 7,12,435 ಹುದ್ದೆಗಳು ಇರಬೇಕು. ಇವುಗಳಲ್ಲಿ ತಳಪಾಯ ಶಿಕ್ಷಣ ಕ್ಷೇತ್ರದ ಶಿಕ್ಷಕರ ಸಂಖ್ಯೆ 5,96,490 ಇದ್ದು, ಬಹಳಷ್ಟು ಭರ್ತಿಯಾಗಿಲ್ಲ.
ನಿರುದ್ಯೋಗದ ಬಗೆಗೆ ಉತ್ತರ ಪ್ರದೇಶದ ಯುವಕರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಯೋಗಿ ಸರಕಾರವು ಲಕ್ಷಾಂತರ ನೇಮಕಾತಿ ಬಗೆಗೆ ಹೇಳುತ್ತಿದೆ. ಆದರೆ ಅವೆಲ್ಲ ಕಾಗದಗಳಲ್ಲೇ ಉಳಿದಿವೆ. ಇತ್ತೀಚೆಗೆ 16 ಲಕ್ಷ ಸರಕಾರೀ ನೌಕರರಿಗೆ ಡಿಎ ನೀಡಲು ಯೋಗಿ ಸರಕಾರ ಘೋಷಣೆ ಮಾಡಿದೆ. 8 ಲಕ್ಷ ಹೊಸ ಹುದ್ದೆ ಘೋಷಣೆ ಆಗಿದ್ದನ್ನು ಯೋಗಿ ಸರಕಾರವು ಹಿಂದಕ್ಕೆ ಪಡೆದುಕೊಂಡಿದೆ. ಕ್ಲಾಸ್ ಫೋರ್ ಹುದ್ದೆಗಳನ್ನೂ ಸಹ ಪೂರ್ತಿ ತುಂಬಿಲ್ಲ. ಹಿಂದಿನ ಅಖಿಲೇಶ್ ಯಾದವ್ ಸರಕಾರವು 3.99 ಲಕ್ಷ ಶಿಕ್ಷಕರ ಹುದ್ದೆ ಘೋಷಿಸಿತ್ತು. ಎಲ್ಲವನ್ನೂ ಯೋಗಿ ಸರಕಾರ ರದ್ದು ಮಾಡಿದೆ ಅಷ್ಟೆ ಎನ್ನುತ್ತಾರೆ ಉತ್ತರ ಪ್ರದೇಶ ಯುವ ಮೋರ್ಚಾದ ಸಂಚಾಲಕ ರಾಜೇಶ್ ಸಚನ್.
ಶಿಕ್ಷಕರ ನೇಮಕಾತಿ ನಿಯಮಾವಳಿಯನ್ನೂ ಯೋಗಿ ಸರಕಾರವು ಬದಲಿಸಿದೆ. ಪ್ರೈಮರಿಯಲ್ಲಿ 100, ಪ್ರೌಢದಲ್ಲಿ 150 ವಿದ್ಯಾರ್ಥಿಗಳಿದ್ದರೆ ಮಾತ್ರ ಮುಖ್ಯೋಪಾಧ್ಯಾಯರನ್ನು ನೀಡಲಾಗುತ್ತದೆ. ಇಲ್ಲದಿದ್ದರೆ ಇಲ್ಲ. 1.58 ಲಕ್ಷ ಶಾಲೆಗಳಿದ್ದು, ಮುಖ್ಯೋಪಾಧ್ಯಾಯರು ಇರುವುದು 32,000 ಮಾತ್ರ. ಹೊಸ ನಿಯಮದಂತೆ 1.26 ಹೆಡ್ ಮಾಸ್ಟರ್ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ.
100ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚಿ ಹತ್ತಿರದ ಶಾಲೆಯ ಜೊತೆ ಸೇರಿಸಲಾಗುತ್ತಿದೆ. 10,000 ಶಾಲೆಗಳು ಮುಚ್ಚಲು, 50,000 ಶಿಕ್ಷಕ ಹುದ್ದೆ ರದ್ದಾಗಲು ಇದು ದಾರಿ ಮಾಡಿದೆ.
ಒಟ್ಟಿನಲ್ಲಿ ಉತ್ತರ ಪ್ರದೇಶ ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದರೂ ಯೋಗಿಯನ್ನು ಉತ್ತಮ ಮುಖ್ಯಮಂತ್ರಿ ಎಂದು ಯಾವ ಮಾನದಂಡದಲ್ಲಿ ಕರೆಯಲಾಗಿದೆ ಎಂಬುದು ದೇವರೇ ಬಲ್ಲ.

Join Whatsapp