20 ವರ್ಷಗಳಿಂದ 450 ರೂ. ಮಾಸಿಕ ವೇತನ| ಗುಲಾಮಗಿರಿ ಎಂದು ತೀರ್ಪು ನೀಡಿದ ನ್ಯಾಯಾಲಯ

Prasthutha|

ತುಫೈಲ್‌ಗೆ ಇದುವರೆಗಿನ ಕಾನೂನುಬದ್ಧ ವೇತನ ನೀಡಲು ಆದೇಶ

- Advertisement -

ಹೊಸದಿಲ್ಲಿ: 20 ವರ್ಷಗಳ ಕಾಲ ಒಬ್ಬ ವ್ಯಕ್ತಿಯೊಂದಿಗೆ 450 ರೂ.ಗಳ ಮಾಸಿಕ ವೇತನಕ್ಕೆ ಕೆಲಸ ಮಾಡುವುದು ಗುಲಾಮಗಿರಿ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಇದು ಸಂವಿಧಾನವು ಖಾತರಿಪಡಿಸಿದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ಸೂಚಿಸಿದೆ. 2001 ರಿಂದ ಕೆಲಸ ಮಾಡುತ್ತಿರುವ ತನಗೆ ಈಗಲೂ 450 ರೂ. ಮಾಸಿಕ ವೇತನವನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರಯಾಗರಾಜ್ ಕಣ್ಣಿನ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ತುಫೈಲ್ ಅಹ್ಮದ್ ಅನ್ಸಾರಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ  ಈ ತೀರ್ಪು ನೀಡಿದೆ.

- Advertisement -

ಆರಂಭದ ದಿನದಿಂದ ಇಲ್ಲಿಯವರೆಗಿನ ಅವಧಿಯನ್ನು ಗಣನೆಗೆ ತೆಗೆದುಕೊಂಡು ಅನ್ಸಾರಿಗೆ ಕಾನೂನುಬದ್ಧವಾಗಿ ಕನಿಷ್ಠ ವೇತನವನ್ನು ಪಾವತಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಅನ್ಸಾರಿ 2001 ಡಿಸೆಂಬರ್ 31 ರಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಇದು 2016 ರ ಕಾಯಿದೆಯ ಅಡಿಯಲ್ಲಿ ಸ್ಥಿರೀಕರಣಕ್ಕೆ ಅರ್ಹವಾಗಿದೆ. ನಾಲ್ಕು ತಿಂಗಳೊಳಗೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.

Join Whatsapp