ಕ್ರೈಸ್ತ ಧರ್ಮಕ್ಕೆ ಸೇರಿದ್ದ 43 ಮಂದಿ ಹಿಂದು ಧರ್ಮಕ್ಕೆ ಮರು ಮತಾಂತರ !

Prasthutha|

ಅಸ್ಸಾಂ: ಅಸ್ಸಾಂನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ 11 ಕುಟುಂಬಗಳ 43 ಮಂದಿ ಹಿಂದುಗಳನ್ನು ಘರ್ ವಾಪ್ಸಿ ಮೂಲಕ ಮರು ಮತಾಂತರ ಮಾಡಲಾಗಿದೆ.

- Advertisement -

ಇತ್ತೀಚೆಗಷ್ಟೇ ಸುಮಾರು 250 ಮಂದಿ, ಕ್ರೈಸ್ತ ಮತದಿಂದ ಹಿಂದು ಧರ್ಮಕ್ಕೆ ವಾಪಸ್ ಬಂದಿದ್ದರು. ಈಗ ಮತ್ತೆ 43 ಜನರು ತಾವು ಸೇರಿದ್ದ ಕ್ರಿಶ್ಚಿಯನ್ ಧರ್ಮ ತೊರೆದು, ಹಿಂದು ಧರ್ಮಕ್ಕೆ ಆಗಮಿಸಿದ್ದಾರೆ. ತಿವಾ ಬುಡಕಟ್ಟು ಜನಾಂಗದ 11 ಕುಟುಂಬಗಳ 43 ಮಂದಿ ವಾಪಸ್ ಹಿಂದು ಧರ್ಮಕ್ಕೆ ಬಂದಿದ್ದು, ಅವರ ಘರ್ ವಾಪ್ಸಿ
ಕಾರ್ಯಕ್ರಮವನ್ನು ಗೋಬಾ ದೇವರಾಜ ರಾಜ್ ಪರಿಷತ್ನಿಂದ ಜಾಗಿರೋಡ್ ಎಂಬಲ್ಲಿ ಆಯೋಜಿಸಲಾಗಿತ್ತು.

ತಿವಾ ಜನಾಂಗದವರು ಕ್ರೈಸ್ತ ಧರ್ಮದಿಂದ, ಹಿಂದು ಧರ್ಮ ಸೇರ್ಪಡೆಗೊಳ್ಳುವ ಕಾರ್ಯಕ್ರಮ ಆಯೋಜಿಸಿದ್ದ ಗೋಬಾ ದೇವರಾಜ ರಾಜ್ ಪರಿಷತ್ ಸದಸ್ಯ ಜರ್ಸಿಂಗ್ ಬೊರ್ಡೊಲೊಯ್, ‘ಅಸ್ಸಾಂನಲ್ಲಿ ಹಿಂದು ಧರ್ಮ ತೊರೆದು, ಕ್ರೈಸ್ತ ಧರ್ಮಕ್ಕೆ ಸೇರಿದ್ದವರನ್ನು ವಾಪಸ್ ಮೂಲ ಧರ್ಮಕ್ಕೆ ಕರೆತರುವ ಅಭಿಯಾನವನ್ನು ನಾವು ಈಗಾಗಲೇ ಶುರು ಮಾಡಿದ್ದೇವೆ ಎಂದ್ದಿದ್ದಾರೆ.

Join Whatsapp