ನೀರಾವರಿ ಇಲಾಖೆಯಲ್ಲಿ 400 ಮಂದಿಯ ನೇಮಕಕ್ಕೆ ಅನುಮತಿ: ಸಚಿವ ಗೋವಿಂದ ಕಾರಜೋಳ

Prasthutha|

ಬೆಂಗಳೂರು: ನೀರಾವರಿ ಇಲಾಖೆಯಲ್ಲಿ 400 ಜನರ ನೇಮಕಕ್ಕೆ ಅನುಮತಿ ನೀಡಿದ್ದು, 300 ಮಂದಿ ಅಸಿಸ್ಟೆಂಟ್ ಇಂಜಿನಿಯರ್, 100 ಮಂದಿ ಜ್ಯೂನಿಯರ್ ಇಂಜಿನಿಯರ್ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

- Advertisement -


ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನೀರಾವರಿ ಇಲಾಖೆಯಲ್ಲಿ ಅನೇಕ ವರ್ಷದಿಂದ ಅಸಿಸ್ಟೆಂಟ್ ಇಂಜಿನಿಯರ್, ಜ್ಯೂನಿಯರ್ ಇಂಜಿನಿಯರ್ ನೇಮಕ ಆಗಿಲ್ಲ. ಸಾವಿರ ಹುದ್ದೆ ನೇಮಕ ಆಗಬೇಕಿದೆ. ಇದರಿಂದ ಕಾಮಗಾರಿ ವಿಳಂಬ ಆಗುತ್ತಿದೆ. ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆ ಜೊತೆ ಮಾತನಾಡಿದ್ದೇನೆ. 400 ಮಂದಿಯ ನೇಮಕಕ್ಕೆ ಅನುಮತಿ ನೀಡಿದ್ದಾರೆ. 300 ಜನ ಅಸಿಸ್ಟೆಂಟ್ ಇಂಜಿನಿಯರ್, ನೂರು ಮಂದಿ ಜ್ಯೂನಿಯರ್ ಇಂಜಿನಿಯರ್ ನೇಮಕ ಮಾಡಿಕೊಳ್ಳಲಾಗುವುದು. ಸಿವಿಲ್ ಇಂಜಿನಿಯರ್’ಗಳ ಕಾಂಟ್ರಾಕ್ಟ್ ನೇಮಕ ಮಾಡಿಕೊಳ್ತಿದ್ದೇವೆ. ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಅಧಿಸೂಚನೆ ಮಾಡಿಕೊಳ್ಳಬೇಕು. ಸ್ಪಷ್ಟವಾಗಿ ಅಭ್ಯರ್ಥಿಗಳಿಗೆ ಹೇಳಬೇಕು ಇದು ಕಾಂಟ್ರಾಕ್ಟ್ ನೇಮಕ ಅಂತ. ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ನೇಮಕ ಮಾಡಲಾಗುವುದು ಎಂದರು.


ಇನ್ನೂ ಮಹದಾಯಿ ನೀರಿನ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಾಲಿನ ನೀರನ್ನ ಪಡೆದೇ ಪಡೆಯುತ್ತೇವೆ ಎಂದ ಗೋವಿಂದ ಕಾರಜೋಳ ಅವರು ಹೇಳಿದರು.



Join Whatsapp