ಸೌದಿ ಅರೇಬಿಯಾ: ಜಗತ್ತಿನ ಜನರು ಹುಬ್ಬೇರಿಸಿ ನೋಡುವಂತ ನಿರ್ಧಾರ ತೆಗೆದುಕೊಂಡಿದ್ದ ಕೇರಳದ ಮಲಪ್ಪುರಂ ಜಿಲ್ಲೆಯ ವಲಂಚೇರಿ ಮೂಲದ ಶಿಹಾಬ್ ಚೋಟ್ಟೂರ್ ಕಾಲ್ನಡಿಗೆಯಲ್ಲಿಯೇ ಯಶಸ್ವಿಯಾಗಿ ಮಕ್ಕಾ ತಲುಪಿದ್ದಾರೆ. 2022ರ ಜೂನ್ 2 ರಂದು ಕಾಲ್ನಡಿಗೆ ಮೂಲಕ ಯಾತ್ರೆ ಕೈಗೊಂಡಿದ್ದ ಅವರು ಮದೀನಾ ಮೂಲಕ ಈಗ ಮಕ್ಕಾ ತಲುಪಿದ್ದಾರೆ.
ಶಿಹಾಬ್ ಕೇರಳದಿಂದ ಕಾಲ್ನಡಿಗೆ ಆರಂಭಿಸಿ ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ಅನ್ನು ಕ್ರಮಿಸಿ, ಮೇ ಎರಡನೇ ವಾರದಲ್ಲಿ ಕುವೈತ್ನಿಂದ ಸೌದಿ ಅರೇಬಿಯಾದ ಗಡಿಯನ್ನು ದಾಟಿದರು. ಸೌದಿ ಅರೇಬಿಯಾವನ್ನು ಪ್ರವೇಶಿಸಿದ ನಂತರ ಶಿಹಾಬ್ ಮದೀನಾಕ್ಕೆ ತಲುಪಿ 21 ದಿನಗಳ ಕಾಲ ತಂಗಿ ಬಳಿಕ ಮಕ್ಕಾ ತಲುಪಿದ್ದಾರೆ.
ಶಿಹಾಬ್ ಚೋಟ್ಟೂರ್ ಈ ಪ್ರಯಾಣ ಪೂರ್ಣಗೊಳಿಸಲು 370 ದಿನಗಳನ್ನು ತೆಗೆದುಕೊಂಡಿದ್ದು, 8640 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ.