ಸೋಮಾಲಿಯಾದಲ್ಲಿ ಬಾಂಬ್ ಸ್ಫೋಟ : 25 ಮಕ್ಕಳು ಮೃತ್ಯು

Prasthutha|

ಮೊಗಡಿಶು: ಜಗತ್ತಿನ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾದ ಸೋಮಾಲಿಯಾದಲ್ಲಿ ಸ್ಫೋಟ ಸಂಭವಿಸಿದ್ದು, 25 ಮಕ್ಕಳು ಮೃತಪಟ್ಟಿದ್ದಾರೆ.

- Advertisement -

ಪೂರ್ವ ಲೋವರ್ ಶಾಬೆಲ್ಲೆಯ ಜನಾಲೆ ಪ್ರದೇಶದ ಮುರಾಲೆ ಗ್ರಾಮದ ಫುಟ್ಬಾಲ್ ಮೈದಾನದಲ್ಲಿ ಸ್ಫೋಟ ಸಂಭವಿಸಿದೆ. ಹಳೆಯ ಬಾಂಬ್‌ನ ಅವಶೇಷಗಳು ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆ. ಸ್ಫೋಟದಲ್ಲಿ 53 ಮಕ್ಕಳು ಗಾಯಗೊಂಡಿದ್ದಾರೆ.

ಕ್ರೊಯೊಲಿ ಪಟ್ಟಣದ ಉಪ ಜಿಲ್ಲಾಧಿಕಾರಿ ಅಬ್ದಿ ಅಹ್ಮದ್ ಅಲಿ, “ಹಳ್ಳಿಯ ತೆರೆದ ಮೈದಾನದಲ್ಲಿ ಮಕ್ಕಳು ಆಡುತ್ತಿದ್ದಾಗ ಬಾಂಬ್‌ಗಳು ಮತ್ತು ನೆಲಬಾಂಬ್‌ಗಳಂತಹ ಯುದ್ಧದ ಸ್ಫೋಟಕ ಅವಶೇಷಗಳು ಸ್ಫೋಟಿಸಿವೆ” ಎಂದು ತಿಳಿಸಿದ್ದಾರೆ.

- Advertisement -

ಮೃತರ ಪೈಕಿ 22 ಮಕ್ಕಳ ಶವಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Join Whatsapp