ಟಿಆರ್‌ಪಿ ಹಗರಣ | ಟಿವಿ ಚಾನೆಲ್‌ಗಳಿಂದ 32 ಕೋಟಿ ರೂ ವಶಕ್ಕೆ ಪಡೆದ ಈಡಿ

Prasthutha|

ಟೆಲಿವಿಷನ್ ರೇಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮೂರು ಚಾನೆಲ್‌ಗಳಿಂದ 32 ಕೋಟಿ ರೂ. ವಶಪಡಿಸಿದೆ ಎಂದು ತಿಳಿದುಬಂದಿದೆ.

- Advertisement -

 ಫಕ್ತ್ ಮರಾಠಿ, ಬಾಕ್ಸ್ ಸಿನೆಮಾ ಮತ್ತು ಮಹಾ ಮೂವಿ ಚಾನೆಲ್‌ನಿಂದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಚಾನೆಲ್‌ಗಳು ಮುಂಬೈ, ಇಂದೋರ್, ದೆಹಲಿ ಮತ್ತು ಗುರ್ಗಾಂವ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಮೂರು ಚಾನೆಲ್ ಗಳ ಬ್ಯಾಂಕ್ ಠೇವಣಿ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರದಲ್ಲಿ ಜಾರಿ ನಿರ್ದೇಶನಾಲಯವು ಚಾರ್ಜ್‌ಶೀಟ್ ಸಲ್ಲಿಸಲಿದೆ ಎನ್ನಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಇತರ ಟಿವಿ ಚಾನೆಲ್‌ಗಳ ಹೆಸರನ್ನು ಸಹ ನಮೂದಿಸಲಾಗುವುದು ಎಂದು ತಿಳಿದುಬಂದಿದೆ. ಮೂರು ಚಾನೆಲ್‌ಗಳು ಟಿಆರ್‌ಪಿ ಹಗರಣಗಳ ಮೂಲಕ ಜಾಹೀರಾತು ಆದಾಯದಲ್ಲಿ 46 ಕೋಟಿ ರೂಪಾಯಿಗಳನ್ನು ಗಳಿಸಿವೆ ಎಂದು ಈಡಿ ಆರೋಪಿಸಿದೆ.

- Advertisement -

 ಈ ಪೈಕಿ ಬಾಕ್ಸ್ ಸಿನೆಮಾ ಮತ್ತು ಮಹಾ ಮೂವಿಯು ಹಗರಣದ ಮೂಲಕ ಶೇ 25 ರಷ್ಟು ರೇಟಿಂಗ್ ಪಡೆದಿದೆ. ಬ್ಯಾರೋಮೀಟರ್ ಅಳವಡಿಸಲಾದ ಐದು ಮನೆಗಳನ್ನು ಕೇಂದ್ರೀಕರಿಸಿ ಈ ಚಾನೆಲ್‌ಗಳು ಹಗರಣ ನಡೆಸಿವೆ ಎಂದು ಈಡಿ ಆರೋಪಿಸಿದೆ. ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ದಾಖಲಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಈ ಚಾನೆಲ್‌ಗಳ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಚಾನೆಲ್‌ಗಳು 46.77 ಕೋಟಿ ರೂ.ಗಳ ಹಗರಣ ನಡೆಸಿದೆ ಎಂದು ಆರೋಪಿಸಲಾಗಿದೆ.



Join Whatsapp