ನವದೆಹಲಿ: ಹರ್ಯಾಣದ ಗುರ್ಗಾಂವ್ ನಲ್ಲಿ ನಮಾಝ್ ಗೆ ಸಂಘಪರಿವಾರ ಮತ್ತೆ ಅಡ್ಡಿಪಡಿಸಿದ್ದು, ಮುಸ್ಲಿಮರ ವಿರುದ್ಧ ಪ್ರತಿಭಟನೆ ನಡೆಸಿದ ಬಲಪಂಥೀಯ ಗುಂಪಿನ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ನಮಾಝ್ ಗಾಗಿ ನೆರೆದ ಮುಸ್ಲಿಮರನ್ನು ಹೀಯಾಳಿಸಿ ಪ್ರಚೋದನಕಾರಿಯಾಗಿ ಘೋಷಣೆ ಕೂಗಿದ ಸಂಘಪರಿವಾರದ ಉದ್ರಿಕ್ತರ ಗುಂಪು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಸಕ್ತ ಸ್ಥಳದಲ್ಲಿ ಶಾಂತಿ ನೆಲೆಸಿದ್ದು, ನಮಾಝ್ ನಿರ್ವಹಣೆಗೆ ಅಡ್ಡಿಪಡಿಸಿದವರನ್ನು ಬಂಧಿಸಿದ್ದೇವೆ. ಕಳೆದ 5 ವಾರಗಳಿಂದ ಮುಸ್ಲಿಮ್ ಸಮುದಾಯ ನಮಾಝ್ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಸಂಘಪರಿವಾರ ಗುಂಪು ತೀವ್ರ ತೊಂದನೆ ನೀಡುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಮಾತುಕತೆ ನಡೆಸುವ ಪ್ರಯತ್ನದಲ್ಲಿದ್ದು, ತ್ವರಿತ ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದು ಹಿರಿಯ ಪೊಲೀಸ ಅಧಿಕಾರಿ ಅನಿತಾ ಚೌಧರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾತ್ರವಲ್ಲ ಸರ್ಕಾರ ನಿಗದಿಪಡಿಸಿದ ನಮಾಝ್ ನಿರ್ವಹಣೆಯ ಸ್ಥಳ ಮತ್ತು ಜನರಿಗೆ ಸೂಕ್ತ ರಕ್ಷಣೆ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.