ಕಳೆದ ಒಂದೂವರೆ ವರ್ಷದಲ್ಲಿ 3.17 ಲಕ್ಷ ಸೈಬರ್ ಅಪರಾಧಗಳು । ಕರ್ನಾಟಕ , ಮಹಾರಾಷ್ಟ್ರ ಮುಂಚೂಣಿಯಲ್ಲಿ!

Prasthutha|

- Advertisement -

ಕೇವಲ ಹದಿನೆಂಟು ತಿಂಗಳಲ್ಲಿ ಭಾರತದಲ್ಲಿ 3.17 ಲಕ್ಷ ಸೈಬರ್ ಅಪರಾಧಗಳು ದಾಖಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ವರದಿ ಮಾಡಿದೆ. ಕಳೆದ 18 ತಿಂಗಳಲ್ಲಿ ಒಟ್ಟು 3,17,439 ಸೈಬರ್ ಅಪರಾಧಗಳು ಮತ್ತು 5,771 ಎಫ್‌ಐಆರ್‌ಗಳನ್ನು ಕೇಂದ್ರೀಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ದಾಖಲಿಸಲಾಗಿದೆ. ಅವುಗಳಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ದಲ್ಲಿ ಗಣನೀಯ ಸಂಖ್ಯೆಯಿದೆ ಎಂದು ಲೋಕಸಭೆಗೆ ಗೃಹ ಸಚಿವಾಲಯವು ಮಂಗಳವಾರ ಮಾಹಿತಿ ನೀಡಿದೆ.

ಫೆಬ್ರವರಿ 28ರ ವರೆಗೆ ಕ್ರೋಢೀಕರಿಸಿದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 21,562 ಸೈಬರ್ ಅಪರಾಧಗಳು ಹಾಗೂ 87 FIR ದಾಖಲಾಗಿದ್ದು ಮಹಾರಾಷ್ಟ್ರದಲ್ಲಿ 50,806 ಸೈಬರ್ ಅಪರಾಧಗಳು ಮತ್ತು 534 FIR ಗಳು ದಾಖಲಾಗಿವೆ ಎಂದು ಕೇಂದ್ರದ ಅಧಿಕೃತ ವರದಿಯೊಂದನ್ನು ಹೊರಬಿಟ್ಟಿದೆ.



Join Whatsapp