ಮುತ್ತಲಿಬ್ ನಾರ್ಶ ನಿಗೂಢ ಸಾವು । ಮೃತದೇಹ ಪತ್ತೆಗೆ ಸಹಕರಿಸಿದ ದುಬೈ ಕೆಸಿಎಫ್

Prasthutha: March 9, 2021

ಬಂಟ್ವಾಳ ತಾಲೂಕಿನ ಕಲ್ಲಡ್ಕ ಬೋಳಂತೂರು ನಾರ್ಶದ ನಿವಾಸಿ ಮುತ್ತಲಿಬ್ ಎಂಬವರು ದುಬೈನಲ್ಲಿ ನಿಗೂಢವಾಗಿ ಮೃತಪಟ್ಟಿದ್ದು , ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ನ ದುಬೈ ಘಟಕದ ಸಹಕಾರದೊಂದಿಗೆ ಮೃತದೇಹವನ್ನು ಇಂದು ದುಬೈ ಪೊಲೀಸರು ಪತ್ತೆ ಮಾಡಿದ್ದಾರೆ.
ಕಳೆದ ಕೆಲವು ದಿವಸಗಳಿಂದ ಮುತ್ತಲಿಬ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮುತ್ತಲಿಬ್ ಅವರು ಯಾರ ಸಂಪರ್ಕಕ್ಕೂ ದೊರಕ್ಕುತ್ತಿರಲಿಲ್ಲ ಎನ್ನಲಾಗಿದೆ. ಮಾರ್ಚ್ 7 ರಂದು ದುಬೈ ಅಲ್ ರಫಾದಲ್ಲಿ ಮುತ್ತಲಿಬ್ ಅವರ ಪಾಸ್ಪೋರ್ಟ್ ಆಧಾರದಲ್ಲಿ ಭಾರತೀಯ ಪ್ರಜೆ ಎಂದು ಅವರನ್ನು ಗುರುತಿಸಲಾಗಿದ್ದು, ಕೆಸಿಎಫ್ ಸಂಘಟನೆಯ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ತಹಶೀಲ್ದಾರ್ ಮೂಲಕ ವಿಳಾಸವನ್ನು ಪತ್ತೆ ಹಾಕಲಾಗಿದೆ .

ಮುತ್ತಲಿಬ್ ನಾರ್ಶ ಪ್ರತಿಭಾವಂತ ಅಂಕಣಕಾರರಾಗಿದ್ದರು. ಜಯಕಿರಣ ,ಮದರಂಗಿ ಪತ್ರಿಕೆಯ ಖಾಯಂ ಬರಹಗಾರರಾಗಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!