ಹೋರಾಟಕ್ಕೆ ಮಣಿದ ಸರಕಾರ: ಪಂಚಮಸಾಲಿ ಸಮಾಜಕ್ಕೆ 2D ಮೀಸಲಾತಿ

Prasthutha|

ಬೆಳಗಾವಿ: ಕಳೆದ ಹಲವಾರು ದಿನಗಳಿಂದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಮೀಸಲಾತಿಯಲ್ಲಿ ಹಲವು ಬದಲಾವಣೆಯೊಂದಿಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗಿದೆ.

- Advertisement -

2C ಮತ್ತು 2D ಎಂಬ ಎರಡು ಪ್ರತ್ಯೇಕ ಪ್ರವರ್ಗ ರಚನೆಗೆ ಸಂಪುಟದಲ್ಲಿ ನಿರ್ಧಾರಿಸಲಾಗಿದೆ. ಅದರಲ್ಲಿ 2D ಪ್ರವರ್ಗಕ್ಕೆ ಪಂಚಮಸಾಲಿ ಸಮುದಾಯವನ್ನು ಸೇರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಮೀಸಲಾತಿ ಪ್ರಮಾಣ ಇನ್ನೂ ನಿಗದಿ ಮಾಡಿಲ್ಲ ಎಂದು ತಿಳಿದು ಬಂದಿದೆ.

ಮಾದ್ಯಮದವರೊಂದಿಗೆ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, 3 ಪ್ರವರ್ಗದಲ್ಲಿ ಇರುವವರನ್ನ 2 ಪ್ರವರ್ಗಕ್ಕೆ ತರಲು ಅನುಮೋದನೆ ಕೊಟ್ಟಿದ್ದೇವೆ. 3A ನಲ್ಲಿದ್ದ ಒಕ್ಕಲಿಗರು ಮತ್ತು ಇತರರನ್ನು ಇನ್ನು ಮುಂದೆ 2C ಅಂತ ಮಾಡಿ ಅಲ್ಲಿಗೆ ಸೇರಿಸುತ್ತೇವೆ. ಹಾಗೆಯೇ 3B ನಲ್ಲಿದ್ದ ಲಿಂಗಾಯತ ಮತ್ತು ಇತರರನ್ನು 2Dಗೆ ಸೇರಿಸುತ್ತೇವೆ. ಇದರಿಂದ 2A ಮತ್ತು 2B ಪ್ರವರ್ಗದವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅವರಿಗೆ ನಿಗದಿಪಡಿಸಿರುವ ಮೀಸಲಾತಿಗೆ ಇದರಿಂದ ತೊಂದೆರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Join Whatsapp