10 ಕಿಮೀ ಪ್ರಯಾಣಕ್ಕೆ 29 ನಿಮಿಷಗಳು| ವಿಶ್ವದ ಎರಡನೇ ನಿಧಾನಗತಿಯ ನಗರ ಬೆಂಗಳೂರು

Prasthutha|

ಹೊಸದಿಲ್ಲಿ: ಬೆಂಗಳೂರು ವಿಶ್ವದ ಎರಡನೇ ನಿಧಾನಗತಿಯ ನಗರವಾಗಿದೆ.
ಲೊಕೇಶನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಟಾಮ್‌ಟಾಮ್ ವರದಿಯ ಪ್ರಕಾರ, ನಗರದಲ್ಲಿ 10 ಕಿಲೋಮೀಟರ್ ಪ್ರಯಾಣಿಸಲು 29 ನಿಮಿಷ 10 ಸೆಕೆಂಡು ತಗಲುತ್ತದೆ.

- Advertisement -

2022 ರಲ್ಲಿ 56 ದೇಶಗಳ 389 ನಗರಗಳ ಸಂಚಾರ ಪ್ರವೃತ್ತಿಯನ್ನು ಪರಿಶೀಲಿಸಿದ ನಂತರ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ರಸ್ತೆಯ ಮೂಲಕ 10 ಕಿಲೋಮೀಟರ್ ಪ್ರಯಾಣಿಸಲು 29 ನಿಮಿಷ ಮತ್ತು 10 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ಎಂದು ಟಾಮ್‌ಟಾಮ್(tomtom index) ವಿವರಿಸುತ್ತದೆ.

ಮೊದಲ ಸ್ಥಾನವನ್ನು ಲಂಡನ್ ಪಡೆದುಕೊಂಡಿದೆ. ಲಂಡನ್‌ನಲ್ಲಿ 10 ಕಿಲೋಮೀಟರ್‌ಗಳನ್ನು ಕ್ರಮಿಸಲು ಸರಾಸರಿ 36 ನಿಮಿಷ ಮತ್ತು 20 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಐರ್ಲೆಂಡ್ ರಾಜಧಾನಿ ಡಬ್ಲಿನ್, ಜಪಾನಿನ ನಗರ ಸಪ್ಪೊರೊ ಮತ್ತು ಇಟಲಿಯ ಮಿಲಾನ್ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

- Advertisement -

ಪುಣೆ ಆರನೇ ಸ್ಥಾನದಲ್ಲಿದ್ದು, ದೆಹಲಿ 34ನೇ ಸ್ಥಾನದಲ್ಲಿದೆ. ಮುಂಬೈ ನಗರವು 10 ಕಿಮೀ ಪ್ರಯಾಣಿಸಲು 21 ನಿಮಿಷಗಳನ್ನು ತೆಗೆದುಕೊಳ್ಳುವ ಮೂಲಕ 47 ನೇ ಸ್ಥಾನದಲ್ಲಿದೆ,

Join Whatsapp