ಜಿತೋ ಬೆಂಗಳೂರು ನಾರ್ಥ್ ಚಾಪ್ಟರ್ ನಿಂದ ಜ.14, 15 ರಂದು 23ನೇ ರಿಯಲ್ ಎಸ್ಟೇಟ್ ಎಕ್ಸೋ ಪೋ    

Prasthutha|

ಬೆಂಗಳೂರು; ಜಿತೋ ಕೆಕೆಜಿ ವಲಯದ ಮಾರ್ಗದರ್ಶನದಲ್ಲಿ ಜಿತೋ ಬೆಂಗಳೂರು ನಾರ್ಥ್ ಚಾಪ್ಟರ್’ನಿಂದ ಜ. 14 ಮತ್ತು 15 ರಂದು ಹೊಟೇಲ್ ಲಲಿತ್ ಅಶೋಕ್’ನಲ್ಲಿ ರಾಷ್ಟ್ರಮಟ್ಟದ ಬೃಹತ್ ರಿಯಲ್ ಎಸ್ಟೇಟ್ ಎಕ್ಸ್ ಪೋ ಮತ್ತು ಸಮಾವೇಶ ಆಯೋಜಿಸಲಾಗಿದೆ.

- Advertisement -

ವೈಷ್ಣೋದೇವಿ ಗ್ರೂಪ್ ಆಫ್ ಅಸೋಸಿಯೇಷನ್ ಮತ್ತು ಆರ್.ಆರ್.ಬಿ.ಸಿ ಮತ್ತು ಸ್ವಾಮಿತ್ವ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಎಸ್.ಎನ್.ಎನ್ ರಾಜ್ ಗ್ರೂಪ್ ಡವಲಪರ್ಸ್ ಅಂಡ್ ಪ್ರಮೋಟರ್ಸ್ ಮೊದಲ ಬಾರಿಗೆ ಬೃಹತ್ ಸಮ್ಮೇಳನದಲ್ಲಿ ಭಾಗಿಯಾಗುತ್ತಿದೆ.  

ಇಂದು ನಗರಗಳು ತ್ವರಿತವಾಗಿ ಬೆಳವಣಿಗೆ ಕಾಣುತ್ತಿದ್ದು, ವ್ಯವಹಾರದ ಅವಕಾಶಗಳು ಹೆಚ್ಚಾಗುತ್ತಿವೆ. ಆದರೆ ಸೂಕ್ತ ಸಂಪರ್ಕ ವೇದಿಕೆಗಳಿಲ್ಲದ ಕಾರಣ ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ರಿಯಲ್ ಎಸ್ಟೇಟ್ ಎಕ್ಸ್ ಪೋ ಗಾಗಿ ವ್ಯಾಪಕ ಕ್ರಮಗಳನ್ನು ಕೈಗೊಳ‍್ಳಲಾಗಿದೆ ಎಂದು ಜಿತೋ ಬೆಂಗಳೂರು ನಾರ್ಥ್ ವಿಭಾಗದ ಅಧ್ಯಕ್ಷ ಇಂದರ್ ಚಂದ್ ಬೊಹ್ರಾ ಹೇಳಿದ್ದಾರೆ.

- Advertisement -

ಎಕ್ಸ್ ಪೋ ಸಂಚಾಲಕ ಪ್ರವೀಣ್ ಶಾ ಮಾತನಾಡಿ, ರಾಜ್ಯಾದ್ಯಂತ ಡೆವಲಪರ್ ಗಳು ಮತ್ತು ಪ್ರಮೋಟರ್  ವಲಯವನ್ನು ಬಲಪಡಿಸಲು ಮತ್ತು ಜೈನ್ ಸಮುದಾಯಕ್ಕೆ ರಿಯಲ್ ಎಸ್ಟೇಟ್ ಕುರಿತು ತಿಳಿವಳಿಕೆ ಮೂಡಿಸಲು ಮತ್ತು ಸಂಪರ್ಕ ಜಾಲವನ್ನು ವಿಸ್ತರಿಸಲು  ಕ್ರಮ ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಜೈನ ಸಮುದಾಯದ ನಡುವೆ ಉತ್ತಮ ವ್ಯಾಪಾರ ವಹಿವಾಟು ನಡೆಯುವಂತೆ ನೋಡಿಕೊಳ್ಳುವ ಉದ್ದೇಶವನ್ನು ಎಕ್ಸ್ ಪೋ ಹೊಂದಿದೆ ಎಂದರು.

ಜಿತೋ ಕೆಕೆಜಿ ವಲಯದ ಅಧ್ಯಕ್ಷ ಅಶೋಕ್ ಸಲೆಚಾ ಮಾತನಾಡಿ, ಇದೇ ಮೊದಲ ಬಾರಿಗೆ ವಲಯವಾರು ಸಮಾವೇಶ ಆಯೋಜಿಸುತ್ತಿದ್ದು, ಬೆಂಗಳೂರು ದಕ್ಷಿಣ, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ಬೆಳಗಾವಿ, ವಿಜಯಪುರ ವಲಯದಿಂದಲೂ ಸಹ ಹೆಚ್ಚಿನ ಪ್ರಮಾಣದಲ್ಲಿ ಜೈನ ಸಮುದಾಯದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Join Whatsapp