ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸವಿನೆನಪಿನಲ್ಲಿ ಕಾಸರಗೋಡು ಮೂಲದ, ಮಂಗಳೂರಿನ ಕೆನರಾ ಗರ್ಲ್ಸ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿನಿ ಅಮೃತಾ ಜೋಷಿ ಬುಧವಾರ ಡೊಂಗರಕೇರಿ ಕೆನರಾ ಹೈಸ್ಕೂಲಿಗೆ ಭೇಟಿ ನೀಡಿದರು.
ಕೆನರಾ ಎಸೋಸಿಯೇಶನ್ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಅಮೃತಾ ಜೋಷಿಯವರು ತಿರಂಗಾ ಯಾತ್ರಾ ಅಭಿಯಾನದ ಅಂಗವಾಗಿ ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶವ್ಯಾಪಿ 22000 ಕಿ.ಮೀ ಸಂಚರಿಸಿದ್ದಾರೆ. ಬರ್ಮಾ, ಬಾಂಗ್ಲಾ, ನೇಪಾಳದ ಗಡಿಯಲ್ಲಿಯೂ ಸಂಚರಿಸಿ ಅಲ್ಲಿ ನಮ್ಮ ಭಾರತೀಯ ಸೈನಿಕರ ಸವಾಲಿನ ಪರಿಸ್ಥಿತಿಯನ್ನು ಕೂಡ ಕಣ್ಣಾರೆ ಕಂಡು ಬಂದಿದ್ದಾರೆ.
ರಾಜ್ಯದ ಸಾಂಸ್ಕೃತಿಕ ರಾಯಭಾರಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಅಮೃತಾ ಜೋಷಿಯವರು ಎಲ್ಲ ಕಡೆ ಜನರು ನಮಗೆ ಒಳ್ಳೆಯ ಬೆಂಬಲ ನೀಡಿದರು. ಇಲ್ಲಿಂದ ಅವರು ಬೈಕ್ ಮೂಲಕ ಕುಂಬಳೆ, ಕೋಝಿಕೋಡ್ ನತ್ತ ತೆರಳಿದರು.