ಮುಂಬೈ | 1700 ಕೋಟಿ ರೂ.ಬೆಲೆಯ ಹೆರಾಯಿನ್ ವಶ

Prasthutha|

ಮುಂಬೈ: 22 ಟನ್ ತೂಕದ ಲೈಕೋರೈಸ್ ಲೇಪಿತ ಹೆರಾಯಿನ್ ಹೊಂದಿದ ಕಂಟೈನರ್ ಅನ್ನು ಮುಂಬೈನ ನವ ಶೇವಾ ಬಂದರಿನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರ ವಿಶೇಷ ವಿಭಾಗ ತಿಳಿಸಿದೆ.

- Advertisement -

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 1725 ಕೋಟಿ ರೂ. ಎಂದು ಪೊಲೀಸರು ತಿಳಿಸಿದ್ದು, ಇದು ಬೃಹತ್ ಮಟ್ಟದ ಪ್ರಕರಣವೆಂದು ಹೇಳಲಾಗಿದೆ.

ವಶಪಡಿಸಿಕೊಂಡ ಹೆರಾಯಿನ್’ನ ಮೌಲ್ಯ ಸುಮಾರು 1725 ಕೋಟಿ ರೂ. ಆಗಿದೆ. ಕಂಟೈನರ್ ಅನ್ನು ದೆಹಲಿಗೆ ಸಾಗಿಸಲಾಗಿದೆ. ಈ ವಶಪಡಿಸುಕೊಳ್ಳುವಿಕೆಯು ನಮ್ಮ ದೇಶದ ಮೇಲೆ ಮಾದಕವಸ್ತು ಮಾಫಿಯಾ ಮತ್ತು ನಮ್ಮ ದೇಶಕ್ಕೆ ಮಾದಕ ದ್ರವ್ಯಗಳನ್ನು ತರಲು ಕಳ್ಳಸಾಗಣೆಗಾರರು ವಿವಿಧ ವಿಧಾನಗಳನ್ನು ಅನುಸರಿಸುತ್ತಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ವಿಶೇಷ ಪಡೆಯ ಹಿರಿಯ ಅಧಿಕಾರಿ ಧಲಿವಾಲ್ ತಿಳಿಸಿದ್ದಾರೆ.

Join Whatsapp