ಉಳ್ಳಾಲ ನಗರಸಭೆಯ ದುರಾಡಳಿತ, ಅವ್ಯವಹಾರ ಖಂಡಿಸಿ ಸೆ.23ರಂದು ನಗರಸಭಾ ಕಚೇರಿಗೆ ಮುತ್ತಿಗೆ: ಎಸ್ ಡಿಪಿಐ

Prasthutha|

ಉಳ್ಳಾಲ:  ಉಳ್ಳಾಲ ನಗರಸಭೆಯಲ್ಲಲಿ ನಡೆಯುತ್ತಿರುವ ದುರಾಡಳಿತ ಮತ್ತು ಅವ್ಯವಹಾರವನ್ನು ಖಂಡಿಸಿ ಸೆ.23ರಂದು ಉಳ್ಳಾಲ ನಗರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು SDPI ಉಳ್ಳಾಲ ನಗರ ಸಮಿತಿಯ ಅಧ್ಯಕ್ಷ ಅಬ್ಬಾಸ್ ಎ. ಆರ್.  ತಿಳಿಸಿದ್ದಾರೆ.

- Advertisement -

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಉಳ್ಳಾಲ ನಗರಸಭೆಯಲ್ಲಿ ಕಾಮಗಾರಿ, ಲೈಸೆನ್ಸ್ , ಡೋರ್ ನಂಬರ್, ತೆರಿಗೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆಯುತ್ತಿದ್ದು, ಇಲ್ಲಿನ ಆಡಳಿತ ಪಕ್ಷ ಮತ್ತು ಅಧಿಕಾರಿಗಳು ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಅನುದಾನ ಬಿಡುಗಡೆ ಸಂದರ್ದಲ್ಲೂ ತಾರತಮ್ಯ ನೀತಿಯನ್ನು ಆಡಳಿತ ಅನುಸರಿಸುತ್ತಿದೆ. ಇಲ್ಲಿ ನಡೆಯುವ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಮತ್ತು ಪಕ್ಷೇತರ ಸದಸ್ಯರು ಬಹಿರಂಗವಾಗಿ ನಗರಸಭೆ ಒಳಗೆ ನಡೆಯುವ ಕರ್ಮಕಾಂಡದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಅತಂಕಕ್ಕೊಳಗಾದ ನಗರಸಭೆ ಅಧ್ಯಕ್ಷರು ಮತ್ತು ಇತರ ಸದಸ್ಯರು ಪತ್ರಿಕಾಗೋಷ್ಠಿ ಕರೆದು ಅರೋಪ ಮಾಡಿದ ತಮ್ಮದೇ ಪಕ್ಷದ ಕೌನ್ಸಿಲರ್  ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಘಟನೆಯ ಬಗ್ಗೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ ಎಂದವರು ಆರೋಪಿಸಿದ್ದಾರೆ.

ಇದೀಗ ಉಳ್ಳಾಲ ನಗರಸಭೆಯ ಜನವಿರೋಧಿ ನಿಲುವುಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟಹಾಕಿದೆ. ನಗರಸಭೆಯ ಆಡಳಿತ ವೈಫಲ್ಯಗಳು ಮತ್ತು ಅವ್ಯವಹಾರದ ವಿರುದ್ಧ SDPI ಉಳ್ಳಾಲ ನಗರಸಭಾ ಸಮಿತಿಯ ವತಿಯಿಂದ  ಸೆ.23ರ ಶುಕ್ರವಾರ ಸಂಜೆ 4;30 ಗಂಟೆಗೆ ಉಳ್ಳಾಲ ನಗರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅಬ್ಬಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp