ಒರಿಸ್ಸಾ: 22 ದಿನಗಳ ಕಾಲ ಅಪ್ರಾಪ್ತೆಯ ಮೇಲೆ ಅತ್ಯಾಚಾರ

Prasthutha|

ಕಟಕ್: 15ರ ಹರೆಯದ ಅಪ್ರಾಪ್ತ ಬಾಲಕಿಯನ್ನು 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ್ ನಡೆಸಿದ ಘಟನೆ ಒರಿಸ್ಸಾದ ಕಟಕ್ ನಲ್ಲಿ  ವರದಿಯಾಗಿದೆ. ಆರೋಪಿಗಳಲ್ಲೋರ್ವನನ್ನು ಬಂಧಿಸಲಾಗಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.

ಇಬ್ಬರು ವ್ಯಕ್ತಿಗಳು ಅತ್ಯಾಚಾರವನ್ನು ಚಿತ್ರೀಕರಿಸಿದ್ದು, ಬಾಲಕಿಗೆ ಬೆದರಿಕೆಯನ್ನು ಹಾಕಿದ್ದಾರೆ. ಇನ್ನೋರ್ವ ಆರೋಪಿಯ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ಪ್ರತೀಕ್ ಸಿಂಗ್ ಹೇಳಿದ್ದಾರೆ.

ಜಗಸ್ತಿಂಗ್ಪುರ ಜಿಲ್ಲೆಯ 9ನೆ ತರಗತಿಯ ಬಾಲಕಿ ಹೆತ್ತವರೊಂದಿಗೆ ಮನಸ್ತಾಪಗೊಂಡು ಕಟಕ್ ನಲ್ಲಿರುವ ತನ್ನ ಹಿರಿಯ ಸಹೋದರಿ ಮತ್ತು ಬಾವನ ಮನೆಗೆ ಮೂರು ವಾರಗಳ ಹಿಂದೆ ಬಂದಿದ್ದಳು. ಆದರೆ ಆಕೆ ಅಲ್ಲಿ ಹೆಚ್ಚು ಕಾಲ ನಿಲ್ಲುವುದನ್ನು ಬಾವ ಇಷ್ಟಪಟ್ಟಿರಲಿಲ್ಲ ಮತ್ತು ತನ್ನ ಮನೆಗೆ ಹಿಂದಿರುಗುವಂತೆ ಹೇಳಿದ್ದ.

- Advertisement -

ಸೆಪ್ಟಂಬರ್ 20ರಂದು ಆಕೆ ಕಟಕ್ ನ ಒ.ಎಂ.ಪಿ ಸ್ಕ್ವಾರ್ ನಲ್ಲಿ ಬಸ್ ಗಾಗಿ ಕಾಯುತ್ತಿರುವ ವೇಳೆ ಸಂತೋಷ್ ಬೆಹ್ರಾ ಎಂಬ ವ್ಯಕ್ತಿಯೊಬ್ಬ ಆಕೆಯನ್ನು ಭೇಟಿಯಾಗಿ ಬಡಂಬಾಡಿ ಬಸ್ ನಿಲ್ದಾಣಕ್ಕೆ ಬಿಡುವುದಾಗಿ ಹೇಳಿದ್ದ. ಆದರೆ ಆತ ಆಕೆಯನ್ನು ಗತಿರೌಪಟ್ನ ಗ್ರಾಮದಲ್ಲಿ ಬಳಿಯ ರಾಕಾದ ತನ್ನ ಸ್ನೇಹಿತನ ಫಾರ್ಮ್ ಹೌಸ್ ಗೆ ಕೊಂಡುಹೋಗಿದ್ದ. ನಂತರ ಸ್ನೇಹಿತನೊಂದಿಗೆ ಸೇರಿ 22 ದಿನಗಳ ಕಾಲ ಆಕೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿದ್ದ.

ಈ ದೃಶ್ಯಗಳ ವೀಡಿಯೊ ಚಿತ್ರೀಕರಿಸಿದ್ದು, ತಪ್ಪಿಸಲು ಪ್ರಯತ್ನಿಸಿದರೆ ಅಥವಾ ವಿಷಯವನ್ನು ಯಾರ ಬಳಿಯಾದರೂ ತಿಳಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುವುದು ಎಂದು ಬೆದರಿಸಿದ್ದಾರೆ. ಅಕ್ಟೋಬರ್ 12ರಂದು ಫಾರ್ಮ್ ಹೌಸ್ ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಅನುಮಾನದಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವಿಷಯ ಬೆಳಕಿಗೆ ಬಂದಿದೆ.

- Advertisement -