ರಸ್ತೆ ಅಪಘಾತ: ರಾಜ್ಯದಲ್ಲಿ ಕಳೆದ 6 ತಿಂಗಳಲ್ಲಿ ಮೃತಪಟ್ಟವರೆಷ್ಟು?

Prasthutha|

ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಚಾಲಕರ ಅಜಾಗರೂಕತೆ, ಹಾಳಾದ ರಸ್ತೆಯಿಂದ ಅಪಘಾತಗಳು ಸಂಭವಿಸುತ್ತಿವೆ. 2023ರ ಮೊದಲಾರ್ಧದಲ್ಲಿ 5830 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ತಿಳಿಸಿದ್ದಾರೆ.

- Advertisement -

 ಮೇ ತಿಂಗಳಲ್ಲಿ ಅಪಘಾತದಿಂದ ಅತ್ಯಧಿಕ ಸಾವು ನೋವು ಸಂಭವಿಸಿದೆ. ಮೇ ತಿಂಗಳಲ್ಲಿ ಅಪಘಾತದಿಂದ ಬರೋಬ್ಬರಿ 1094 ಜನ ಮೃತಪಟ್ಟಿದ್ದಾರೆ. ಜೂನ್​ನಲ್ಲಿ 965, ಜುಲೈನಲ್ಲಿ 807, ಆಗಸ್ಟ್​​ನಲ್ಲಿ 795 ಜನ ನಿಧನರಾಗಿದ್ದಾರೆ. ಅಪಘಾತದ ಸಾವಿಗೀಡಾದ ಹೆಚ್ಚಿನ ಜನರು ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯವರಾಗಿದ್ದಾರೆ.

ಹೆಚ್ಚು ಬೈಕ್​ ಸವಾರರೇ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಶೇಕಡಾ 60 ರಷ್ಟು ಜನ ಬೈಕ್ ಸವಾರರು ಎಂಬುವುದು ಆಘಾತಕಾರಿ ಅಂಶವಾಗಿದೆ. ಮೂರನೇ ಎರಡರಷ್ಟು ಬೈಕ್ ಸವಾರರು ರಸ್ತೆಯಲ್ಲಿ ಹೋಗುವಾಗ ಹೆಲ್ಮೆಟ್ ಧರಿಸದೇ ಇರುವುದರಿಂದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

- Advertisement -

ಇನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇ ತಿಂಗಳಲ್ಲಿ 29, ಜೂನ್​ನಲ್ಲಿ 28, ಜುಲೈನಲ್ಲಿ 8 ಮತ್ತು ಆಗಸ್ಟ್​ನಲ್ಲಿ 6 ಜನ ಅಪಘಾತದಿಂದ ನಿಧನರಾಗಿದ್ದಾರೆ.



Join Whatsapp