ಬ್ಯಾಂಕ್​ಗೆ ವಂಚನೆ: ಬೆಂಗಳೂರಿನ ಕಂಪನಿಯೊಂದರ 105.5 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

Prasthutha|

ಬೆಂಗಳೂರು: ಬೆಂಗಳೂರಿನ ಭಾರತ್ ಇನ್ಫ್ರಾ ಎಕ್ಸ್​ಪೋರ್ಟ್ಸ್​​ ಆ್ಯಂಡ್ ಇಂಪೋರ್ಟ್ಸ್​ ಕಂಪನಿಯ ನೂರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

- Advertisement -

ಬ್ಯಾಂಕ್​ಗೆ ವಂಚನೆ ಸಂಬಂಧ ಕಂಪನಿಯ ಸ್ಥಿರ ಮತ್ತು ಚರಾಸ್ತಿ ಸೇರಿದಂತೆ ಬರೋಬ್ಬರಿ 105.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿದೆ. ಬೆಂಗಳೂರು ನಗರದಲ್ಲಿರುವ ರೆಸಿಡೆನ್ಷಿಯಲ್ ನಿವೇಶನಗಳು, ಕಮರ್ಷಿಯಲ್ ಪ್ರಾಪರ್ಟಿ, ಫಾರ್ಮ್​ಹೌಸ್ ಸೇರಿದಂತೆ 104.90 ಕೋಟಿ ಮೌಲ್ಯದ ಆಸ್ತಿ ಹಾಗೂ 14.5 ಲಕ್ಷ ನಗದು ಜಪ್ತಿ ಮಾಡಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾಗೆ 113.38 ಕೋಟಿ ರೂಪಾಯಿ ಸಾಲ ಉಳಿಸಿಕೊಂಡ ಆರೋಪ ಹಾಗೂ ಸಾಲದ ಹಣಕ್ಕಾಗಿ ಸುಳ್ಳು ದಾಖಲೆಗಳನ್ನು ನೀಡಿದ ಆರೋಪ ಭಾರತ್ ಇನ್ಫ್ರಾ ಎಕ್ಸ್​ಪೋರ್ಟ್ಸ್​​ ಆ್ಯಂಡ್ ಇಂಪೋರ್ಟ್ಸ್​ ಕಂಪನಿ ಮೇಲೆ ಕೇಳಿಬಂದಿತ್ತು. ಈ ಸಂಬಂಧ ಕಂಪನಿ, ಪ್ರಮೋಟರ್ಸ್ ಮತ್ತು ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ಈ ಪ್ರಕರಣದಲ್ಲಿ ಪ್ರವೇಶಿಸಿದ್ದ ಇಡಿ, ಕಳೆದ ಜೂನ್​ನಲ್ಲಿ ಕಂಪನಿಗೆ ಸೇರಿದ ಹಲವೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಇದೀಗ ಕಂಪೆನಿಗೆ ಸೇರಿದ ಸ್ಥಿರ ಮತ್ತು ಚರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

Join Whatsapp