2021ರ ಶಾಂತಿ ನೋಬೆಲ್ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತೆ ಮರಿಯಾ ರೆಸ್ಸಾ ಮತ್ತು ದಿಮಿತ್ರಿ ಮುರತೊವ್

Prasthutha|

ಓಸ್ಲೋ: ವಾಕ್ ಸ್ವಾತಂತ್ರ್ಯದ ರಕ್ಷಣೆಗೆ ಮಾಡಿದ ಸೇವೆಗಾಗಿ ಪತ್ರಕರ್ತರಾದ ಮರಿಯಾ ರೆಸ್ಸಾ ಮತ್ತು ದಿಮಿತ್ರಿ ಮುರತೋವ್ ರಿಗೆ 2021ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಶಾಂತಿ ಪಾಲನೆಗಾಗಿ ಮಾಡಿದ ಮಾನವೀಯ ಸೇವೆಯೆಂದು ಪರಿಗಣಿಸಿ ಶಾಂತಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

- Advertisement -


ನಾರ್ವೆಯ ಓಸ್ಲೋದಲ್ಲಿರುವ ನಾರ್ವೇಜಿಯನ್ ನೋಬೆಲ್ ಸಮಿತಿಯು ಶುಕ್ರವಾರ ಈ ಪ್ರಶಸ್ತಿ ಘೋಷಣೆ ಮಾಡಿತು.
ಕಳೆದ ವರುಷ ಜಗತ್ತಿನ ಹಸಿವು ನೀಗಿಸಲು ದುಡಿದ ರಂಗವಾದ ಆಹಾರ ಕ್ಷೇತ್ರಕ್ಕೆ ನೋಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು. ಅಂದರೆ 2020ರ ನೋಬೆಲ್ ಶಾಂತಿ ಪ್ರಶಸ್ತಿಯು ಸಂಯುಕ್ತ ರಾಷ್ಟ್ರ ಸಂಸ್ಥೆಯ (ಯುಎನ್) ವರ್ಲ್ಡ್ ಫುಡ್ ಪ್ರೋಗ್ರಾಂಗೆ ನೀಡಲಾಗಿತ್ತು.



Join Whatsapp