ಕೊಲೊಂಬೊ: ಶ್ರೀಲಂಕಾ ರಾಜಧಾನಿ ಕೊಲೊಂಬೊದಿಂದ ಸುಮಾರು 210 ಕಿ.ಮೀ. ದೂರದಲ್ಲಿರುವ ಅಂಪಾರಾ ಜಿಲ್ಲೆಯ ಪಲ್ಲಕ್ಕಾಡು ಗ್ರಾಮದಲ್ಲಿರುವ ಕಸದ ಡಂಪಿಂಗ್ ಯಾರ್ಡ್ ನಲ್ಲಿ ಪ್ಲಾಸ್ಟಿಕ್ ಸೇವಿಸಿ ಕಳೆದ ಎಂಟು ವರ್ಷಗಳಲ್ಲಿ ಸುಮಾರು 20 ಆನೆಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಮೃತ ಆನೆಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ ಅವುಗಳ ಹೊಟ್ಟೆಯಲ್ಲಿ ದೊಡ್ಡಪ್ರಮಾಣದಲ್ಲಿ ಪ್ಲಾಸ್ಟಿಕ್ ಗಳು ಇರುವುದು ಕಂಡುಬಂದಿದೆ ಎಂದು ವನ್ಯಜೀವಿ ಪಶುವೈದ್ಯ ನಿಹಾಲ್ ಪುಷ್ಪಕುಮಾರ್ ಹೇಳಿದ್ದಾರೆ.
ವಿಪರ್ಯಾಸವೆಂದರೆ ಶ್ರೀಲಂಕಾದಲ್ಲಿ ಆನೆಗಳನ್ನು ಪೂಜಿಸಲಾಗುತ್ತದೆ. ಆದರೆ ಇದೇ ರಾಷ್ಟ್ರದಲ್ಲಿ ಆನೆಗಳು ಅಳಿವಿನಂಚಿನಲ್ಲಿವೆ. 2011ರಲ್ಲಿ 14 ಸಾವಿರದಷ್ಟಿದ್ದ ಆನೆಗಳ ಸಂಖ್ಯೆ ಇದೀಗ 6 ಸಾವಿರಕ್ಕೆ ಇಳಿಕೆಯಾಗಿದೆ.
ಆಹಾರ ಹುಡುಕಿಕೊಂಡು ನಗರಪ್ರದೇಶಗಳತ್ತ ಹೆಜ್ಜೆಹಾಕುವ ಆನೆಗಳು ಅಲ್ಲಿನ ಆಹಾರ ಸೇವಿಸುವ ಭರದಲ್ಲಿ ಪ್ಲಾಸ್ಟಿಕ್ ಗಳನ್ನು ಕೂಡ ನುಂಗುತ್ತಿವೆ. ಇವು ಕರಗದೆ ಹೊಟ್ಟೆಯಲ್ಲೇ ಉಳಿದು ಅವುಗಳ ಸಾವಿಗೆ ಕಾರಣವಾಗುತ್ತಿವೆ.