ಮುಂಬೈ: ಮುಂಬೈನಲ್ಲಿ ಯುವತಿ ಮೇಲಿನ ಮೇಲಿನ ಅತ್ಯಾಚಾರ ಘಟನೆ ಮಾಸುವ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಂದು ಹೇಯ ಕೃತ್ಯ ನಡೆದದ್ದು ರವಿವಾರ ಬಹಿರಂಗಗೊಂಡಿದೆ.. ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್ ನಗರದ ರೈಲ್ವೆ ಸ್ಟೇಷನ್ ಆವರಣದಲ್ಲಿ 14 ವರ್ಷದ ಬಾಲಕಿ ಮೇಲೆ 35 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ಶ್ರೀಕಾಂತ್ ಗಾಯಕ್ವಾಡ್ ಅಲಿಯಾಸ್ ದಾದಾ ಎಂದು ಗುರುತಿಸಲಾಗಿದೆ.
ಮುಂಬೈನ ಸಾಕಿನಾಕ ಪ್ರದೇಶದಲ್ಲಿ ಯುವತಿಯ ಮೇಲೆ ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ಈ ಘಟನೆ ನಡೆದ ಮಾರನೇ ದಿನವೇ ಮತ್ತೊಂದು ಕೃತ್ಯ ನಡೆದಿದೆ. ಅದರ ಮರುದಿನ ಚೆನ್ನೈನಲ್ಲಿ ಹೇಯ ಕೃತ್ಯ ನಡೆದಿತ್ತು.