ತಾಲಿಬಾನ್ ಬೆಂಬಲಿಸಿ ಪೋಸ್ಟ್ ಮಾಡಿದ 14 ಮಂದಿಯ ಬಂಧನ!

Prasthutha|

ಅಸ್ಸಾಮ್ : ಅಫ್ಘಾನಿಸ್ತಾನ ರಾಷ್ಟ್ರವನ್ನು ಕೈವಶ ಮಾಡಿಕೊಂಡಿರುವ ತಾಲಿಬಾನ್ ತಮ್ಮ ಆಳ್ವಿಕೆ ಶುರುಮಾಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನ್ ಬೆಂಬಲಿಸಿ ಪೋಸ್ಟ್ ಮಾಡಿದ 14 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಅಸ್ಸಾಮ್ ನಲ್ಲಿ ನಡೆದಿದೆ.

- Advertisement -


ಬಂಧಿತರ ಮೇಲೆ ಯುಎಪಿಎ , ಐಟಿ ಕಾಯಿದೆ ಮತ್ತು ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ .
ದೇಶದ ಭದ್ರತೆಗೆ ಅಪಾಯಕಾರಿಯಾಗಿರುವ ತಾಲಿಬಾನ್ ಪರ ನಿಲುವು ಹೊಂದಿರುವವರನ್ನು ಬಂಧಿಸುತ್ತೇವೆ ಮತ್ತು ನಾವು ಸಾಮಾಜಿಕ ಜಾಲಾತಾಣದ ಮೇಲೆ ನಿಗಾ ಇಟ್ಟಿದ್ದೇವೆಂದು ಪೊಲೀಸ್ ಅಧಿಕಾರಿ ಡಿ.ಐ.ಜಿ ವೈಲೆಟ್ ಬುರಾ ತಿಳಿಸಿದ್ದಾರೆ.



Join Whatsapp