ವಿವಾದಿತ ಯು.ಎಮ್.ಎನ್.ಒ ಮಾದರಿ ಅಧಿಕಾರ ಚಲಾವಣೆಗೆ ಮುಂದಾದ ಮಲೇಷ್ಯ ನೂತನ ಪ್ರಧಾನಿ

Prasthutha|

ಕೌಲಾಲಂಪುರ್: ಮಲೇಷ್ಯಾದಲ್ಲಿ ಸುದೀರ್ಘ ಆಡಳಿತ ನಡೆಸಿದ ರಾಜಕೀಯ ಪಕ್ಷವು 2018 ರ ಸೋಲಿನ ಆಘಾತದಲ್ಲಿ ಕಳೆದುಕೊಂಡ ವರ್ಚಸ್ಸನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಇಸ್ಮಾಯಿಲ್ ಸಾಬ್ರಿ ಯಾಕೂಬ್ ಅವರನ್ನು ರಾಷ್ಟ್ರದ ನೂತನ ನಾಯಕನಾಗಿ ಮಲೇಷ್ಯನ್ ದೊರೆ ನಾಮನಿರ್ದೇಶನ ಮಾಡಿದ್ದಾರೆ.

61 ವರ್ಷದ ಇಸ್ಮಾಯಿಲ್ ಸಾಬ್ರಿ ಅವರು ಶನಿವಾರ ಮಲೇಷ್ಯಾದ 9ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿಂದಿನ ಮುಹಿಯಿದ್ದೀನ್ ಯಾಸೀನ್ ಸರ್ಕಾರದಲ್ಲಿ ಇಸ್ಮಾಯಿಲ್ ಅವರು ಉಪ ಪ್ರಧಾನಿಯಾಗಿದ್ದರು. ಒಕ್ಕೂಟ ಸರ್ಕಾರದ ಆಂತರಿಕ ಕಲಹದ ಹಿನ್ನೆಲೆಯಲ್ಲಿ 18 ತಿಂಗಳ ಸರ್ಕಾರಕ್ಕೆ ಯಾಸೀನ್ ಅವರು ಸೋಮವಾರ ರಾಜೀನಾಮೆ ನೀಡಿದ್ದರು.

- Advertisement -

ಇಸ್ಮಾಯಿಲ್ ಅವರು ಪ್ರಧಾನಿ ಹುದ್ದೆಗೇರುವುದರೊಂದಿಗೆ ಯುನೈಟೆಡ್ ಮಲೇಷ್ಯಾ ರಾಷ್ಟ್ರೀಯ ಸಂಘಟನೆ (UMNO) ಯ ನಿಯಮಾವಳಿಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. 1957 ರಲ್ಲಿ ಬ್ರಿಟನ್ ನಿಂದ ಸ್ವಾತಂತ್ರ್ಯ ಪಡೆದ ನಂತರ ಮಲೇಷ್ಯಾವನ್ನು UMNO ಮುನ್ನಡೆಸಿತ್ತು. ಆದರೆ 2018 ರ ಚುನಾವಣೆಯಲ್ಲಿ ಬಹು ಕೋಟಿ ಡಾಲರ್ ಹಣಕಾಸಿನ ಹಗರಣದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ಸರ್ಕಾರವನ್ನು ವಜಾಗೊಳಿಸಲಾಗಿತ್ತು. ಇಸ್ಮಾಯಿಲ್ ಸಾಬ್ರಿಯವರು 114 ಶಾಸಕರ ಬೆಂಬಲದೊಂದಿಗೆ ಸರ್ಕಾರವನ್ನು ಮುನ್ನಡೆಸಲಿದ್ದಾರೆಂದು ದೊರೆ ಸುಲ್ತಾನ್ ಅಹ್ಮದ್ ಶಾ ಅವರು ತಿಳಿಸಿದ್ದಾರೆ.

ಸಂಸತ್ತಿನಲ್ಲಿ ಬಹುಮತದ ಬೆಂಬಲವಿರುವ ನಂಬಿಗಸ್ಥ ವ್ಯಕ್ತಿಯನ್ನು ಪ್ರಧಾನಿಯಾಗಿ ಮಲೇಷ್ಯಾ ದೊರೆ ಪ್ರಧಾನಿಯಾಗಿ ನೇಮಿಸುವುದು ಮಲೇಷ್ಯಾದ ಸಾಂಪ್ರದಾಯಿಕ ವಾಡಿಕೆ. ಪ್ರಧಾನಿಯ ನೇಮಕಾತಿಯಲ್ಲಿ ಮಲೇಷ್ಯಾ ದೊರೆಯು ಪ್ರಮುಖ ಪಾತ್ರ ವಹಿಸಲಿದ್ದಾರೆ. ಪ್ರಸಕ್ತ ದೇಶದ ರಾಜಕೀಯ ಗೊಂದಲಗಳಿಗೆ ಅಂತ್ಯವನ್ನು ಘೋಷಿಸುವ ನಿಟ್ಟಿನಲ್ಲಿ ರಾಜಕೀಯ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ದೇಶಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದಾಗಬೇಕೆಂದು ಅವರು ಒತ್ತಾಯಿಸಿದರು.

- Advertisement -