ಬೆಂಗಳೂರು; ಆರನೇ ತರಗತಿ ಓದುತ್ತಿದ್ದ 12 ವರ್ಷದ ಬಾಲಕನೋರ್ವ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.
ಲಾರಿ ಚಾಲಕನಾಗಿದ್ದ ಸಿದ್ದರಾಜು ಅವರ ಪುತ್ರ ದರ್ಶನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಬಾಲಕ.
ಮನೆ ಕೆಲಸ ಮಾಡಿಕೊಂಡಿದ್ದ ಅಮ್ಮ ಹಾಗೂ ಚಾಲಕನಾಗಿದ್ದ ತಂದೆ ನಿನ್ನೆ ಕೆಲಸಕ್ಕೆ ಹೋಗಿದ್ದು, ಅಣ್ಣ ಹೊರಗಡೆ ಆಟವಾಡುತ್ತಿದ್ದಾಗ ಮನೆಗೆ ಬಂದ ದರ್ಶನ್ ನೇಣಿಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೆ ನಿಖರವಾದ ಕಾರಣ ಪತ್ತೆಯಾಗಿಲ್ಲ. ಗಾಳಿಪಟ ಹಾರಿಸುವಾಗ ಬೇರೊಬ್ಬ ಬಾಲಕನ ಜೊತೆಗೆ ಮಾಡಿಕೊಂಡ ಜಗಳದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ.
ದರ್ಶನ್ ನೇಣಿಗೆ ಶರಣಾಗಿರುವುದು ಕಿಟಕಿಯಿಂದ ಮುಂಭಾಗದ ಮನೆಯವರಿಗೆ ಕಾಣಿಸಿದ್ದು ತಕ್ಷಣವೇ ಓಡಿ ಬಂದು ಬಾಗಿಲು ಹೊಡೆದು ನೋಡಿದರಾದರೂ ಆ ವೇಳೆಗಾಗಲೇ ದರ್ಶನ್ ಮೃತಪಟ್ಟಿದ್ದ ಎನ್ನಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.