ರಾಜ್ಯ ಹಾಕಿ ತಂಡದಲ್ಲಿ ಕೊಡಗಿನ 11 ಆಟಗಾರರಿಗೆ ಸ್ಥಾನ

Prasthutha|

ಮಡಿಕೇರಿ: ಹಾಕಿ ಇಂಡಿಯಾದಿಂದ ತಮಿಳುನಾಡಿನ ಕೋವಿಲ್ ಪಟದಟಿಯಲ್ಲಿ ಡಿಸೆಂಬರ್ 16ರಿಂದ 25ರವರೆಗೆ ನಡೆಯಲಿರುವ 11ನೇ ರಾಷ್ಟ್ರೀಯ ಜೂನಿಯರ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ಹಾಕಿ ಕರ್ನಾಟಕ ತಂಡದ ನಾಯಕನಾಗಿ ಚಂದುರ ಬಿ.ಪೂವಣ್ಣ ಆಯ್ಕೆಯಾಗಿದ್ದಾರೆ.

- Advertisement -

18 ಮಂದಿಯ ತಂಡವನ್ನು ಹಾಕಿ ಕರ್ನಾಟಕ ಪ್ರಕಟಿಸಿದ್ದು, ತಂಡದಲ್ಲಿ ಕೊಡಗಿನ ಇಟ್ಟು 11 ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ತಂಡದ ಕೋಚ್ ಆಗಿಯೂ ಜಿಲ್ಲೆಯವರೇ ಆದ ಮೆಚಂಡ ತನು ನಂಜಪ್ಪ ತೆರಳುತ್ತಿದ್ದಾರೆ. ತಂಡದ ನಾಯಕನಾಗಿ ಸಿ.ಬಿ. ಪೂವಣ್ಣ ಹಾಗೂ ಕೊಡಗಿನ ಇತರ ಆಟಗಾರರಾದ ಅಮ್ಮಣಕುಟ್ಟಂಡ ದೇಸ್ ಪೂವಯ್ಯ, ಕುಪ್ಪಂಡ ಭುವನ್ ಕುಶಾಲಪ್ಪ, ದೀಕ್ಷಿತ್ ಎ ಹೆಚ್, ಆಶಿಕ್ ಎನ್.ಆರ್, ಮೇಷಂಡ ಚಿರನ್ ಮೇದಪ್ಪ, ಮೇಕೇರಿರ ನೇಹಾಲ್ ತಮ್ಮಯ್ಯ, ಬಿಪಿನ್ ಬಿ,ಆರ್, ನಿಕಿಲ್ ಜೋಸೆಫ್, ಕೆ,ಜೆ ಅರ್ಜುನ್ ಬಿ, ಹಾಗೂ ಮೊಳ್ಳೇರ ಶಾನ್ ಮೊಣ್ಣಪ್ಪ ಸ್ಥಾನ ಪಡೆದುಕೊಂಡಿದ್ದಾರೆ.

Join Whatsapp