ನಕ್ಸಲರಿಂದ ಬಾಂಬ್ ಸ್ಫೋಟ: 11 ಸೈನಿಕರು ಹುತಾತ್ಮ

Prasthutha|

ರಾಯ್’ಪುರ: ಛತ್ತೀಸ್’ಗಢ್’ದ ದಾಂತೇವಾಡ ಜಿಲ್ಲೆಯ ಅರನ್’ಪುರ ಎಂಬಲ್ಲಿ ಛತ್ತೀಸ್’ಗಢ ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ಐಇಡಿ-ಸುಧಾರಿತ ಸ್ಫೋಟಕ ಸಾಧನಯನ್ನು ಅಳವಡಿಸಿ ಸ್ಫೋಟಿಸಿದ ಪರಿಣಾಮ ಕನಿಷ್ಠ ಹನ್ನೊಂದು ಮಂದಿ ಸೈನಿಕರು ಹುತಾತ್ಮರಾದ ಘಟನೆ ಬುಧವಾರ ನಡೆದಿದೆ.

- Advertisement -

ಗುಪ್ತಚರ ಮಾಹಿತಿಯ ನಂತರ ಪ್ರಾರಂಭಿಸಲಾದ ಮಾವೋವಾದಿ ವಿರೋಧಿ ಕಾರ್ಯಾಚರಣೆಯಿಂದ ಪೊಲೀಸರು ಹಿಂದಿರುಗುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಅವರು ಹೇಳಿದರು.

ಮಾವೋವಾದಿಗಳ ವಿರುದ್ಧ ಹೋರಾಡಲು ತರಬೇತಿ ಪಡೆದ ಸ್ಥಳೀಯ ಬುಡಕಟ್ಟು ಜನರನ್ನು ಒಳಗೊಂಡಿರುವ ಛತ್ತೀಸ್’ಗಢ ಪೊಲೀಸರ ವಿಶೇಷ ಪಡೆ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್’ಜಿ) ಗೆ ಈ ಪೊಲೀಸರು ಸೇರಿದವರಾಗಿದ್ದಾರೆ.

- Advertisement -

ಎಡಪಂಥೀಯ ಉಗ್ರವಾದದ ಕೇಂದ್ರವಾಗಿರುವ ಬಸ್ತಾರ್’ನಲ್ಲಿ ಬಂಡುಕೋರರ ವಿರುದ್ಧ ಹಲವಾರು ಯಶಸ್ವಿ ಕಾರ್ಯಾಚರಣೆಗಳಲ್ಲಿ ಡಿಆರ್ಜಿ ಪ್ರಮುಖ ಪಾತ್ರ ವಹಿಸಿದೆ. ದಾಳಿ ಮತ್ತು ಪರಿಣಾಮಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.



Join Whatsapp