ಎಸ್ಸೆಸೆಲ್ಸಿಯಲ್ಲಿ 100% ಫಲಿತಾಂಶ: ಸಂತೃಪ್ತಿ ವ್ಯಕ್ತಪಡಿಸಿದ ಕಣ್ಣೂರು ಕಾರುಣ್ಯ ಸೇವೆ

Prasthutha|

ಮಂಗಳೂರು: ಕಣ್ಣೂರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ 2024-25ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದು, ಈ ಬಾರಿ ಪರೀಕ್ಷೆ ಬರೆದ 41 ವಿದ್ಯಾರ್ಥಿಗಳು ಕೂಡ ಪಾಸಾಗಿದ್ದಾರೆ. ಶಾಲೆಯ ಫಲಿತಾಂಶಕ್ಕೆ ಕಣ್ಣೂರು ಕಾರುಣ್ಯ ಸೇವೆ ಸಂತೃಪ್ತಿ ವ್ಯಕ್ತಪಡಿಸಿದೆ.

- Advertisement -

1910ರಲ್ಲಿ ಸ್ಥಾಪನೆಗೊಂಡ ಕಣ್ಣೂರು ಸರ್ಕಾರಿ ಪ್ರಾರ್ಥಮಿಕ ಶಾಲೆಯನ್ನು (ಪಳ್ಳಿ ಶಾಲೆ) ನಂತರ ಹಿರಿಯ ಪ್ರಾಥಮಿಕ ಶಾಲೆಯಾಗಿ ಅಭಿವೃದ್ಧಿಪಡಿಸಲಾಯಿತು. 2009 ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಪ್ರಸ್ತುತ 114ನೇ ವರ್ಷಕ್ಕೆ ಕಾಲಿಟ್ಟಿದೆ. ಕಣ್ಣೂರಿನ ನಮ್ಮೆಲ್ಲರ ನೆಚ್ಚಿನ ಶಾಲೆಯು 2023-24ನೇ ಸಾಲಿನ SSLC ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡಿರುವುದು ಬಹಳ ಸಂತೋಷದ ವಿಚಾರ ಎಂದು ಸಂಸ್ಥೆ ಹೇಳಿದೆ.

ಕಠಿಣ ಪರಿಶ್ರಮದಿಂದ ಕಲಿತು ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೆ ಹೃದಯಾಂತರಾಳದ ಅಭಿನಂದನೆಗಳು. ಈ ಫಲಿತಾಂಶದ ಹಿಂದೆ ವಿದ್ಯಾರ್ಥಿಗಳ ಮಾತ್ರವಲ್ಲ, ಶಿಕ್ಷಕರ ಕಠಿಣ ಪರಿಶ್ರಮವೂ ಇದೆ ಎಂಬುದನ್ನು ಮರೆಯಬಾರದು ಎಂದು ಸಂಸ್ಥೆ ಹೇಳಿದೆ.

- Advertisement -

ನಮ್ಮ ಊರಿಗೆ ಹೆಮ್ಮೆ ತಂದ ಎಲ್ಲಾ ವಿದ್ಯಾರ್ಥಿ -ವಿದ್ಯಾರ್ಥಿನಿಗಳಿಗೆ , ಶಾಲೆಯ ಎಲ್ಲಾ ಅಧ್ಯಾಪಕರುಗಳಿಗೆ ಮತ್ತು ಶಾಲಾ ಆಡಳಿತ ಮಂಡಳಿಗೆ ಎಲ್ಲರಿಗೂ ಕಣ್ಣೂರು ಸರ್ವ ನಾಗರಿಕರ ಪರವಾಗಿ ಅಭಿನಂದನೆಗಳನ್ನು ಅರ್ಪಿಸುತ್ತಿದ್ದೇವೆ ಎಂದು ‘ಕಣ್ಣೂರ್ ಕಾರುಣ್ಯ ಸೇವೆ’, ಮಂಗಳೂರು ಪ್ರಕಟನೆಯಲ್ಲಿ ತಿಳಿಸಿದೆ.



Join Whatsapp