ನವೀನ್ ಮೃತದೇಹ ತರುವ ಜಾಗದಲ್ಲಿ 10 ಮಂದಿಯನ್ನು ಕರೆ ತರಬಹುದು: ಶಾಸಕ ಅರವಿಂದ ಬೆಲ್ಲದ್ ಬೇಜವಾಬ್ದಾರಿ ಹೇಳಿಕೆ

Prasthutha|

ಧಾರವಾಡ: ಖಾರ್ಕಿವ್‌ ನಲ್ಲಿ ರಷ್ಯಾದ ಪಡೆಗಳ ಶೆಲ್ ದಾಳಿಯಲ್ಲಿ ಮೃತರಾದ ನವೀನ್ ಜ್ಞಾನ ಗೌಡರ್ ಅವರ ದೇಹವನ್ನು ಮರಳಿ ತರುವ ಬದಲು 10 ಜನರನ್ನು ವಿಮಾನದಲ್ಲಿ ಸ್ಥಳಾಂತರಿಸಬಹುದು ಎಂದು ಶಾಸಕ ಅರವಿಂದ್ ಬೆಲ್ಲದ್ ಅವರು ಬೇಜವಾಬ್ದಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ.

- Advertisement -

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿ ನವೀನ್​ ಶವ ತರಲು ಪ್ರಯತ್ನ ಮಾಡುತಿದ್ದಾರೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ತರುವ ಪ್ರಯತ್ನ ನಡೆದಿದೆ. ಅಲ್ಲಿ ಯುದ್ದ ನಡೆಯುತ್ತಿದೆ, ಈ ಬಗ್ಗೆ ಮಾದ್ಯಮದವರೇ ಅದನ್ನು ತೊರಿಸುತಿದ್ದಾರೆ. ಜೀವಂತ ಇದ್ದವರನ್ನೇ ತರುವದು ಕಷ್ಟ ಆಗಿದೆ, ಶವ‌ ತರೋದು ಇನ್ನೂ ಕಷ್ಟ ಇದೆ. ವಿಮಾನದಲ್ಲಿ ಶವ ತರಲು ಹೆಚ್ಚು ಜಾಗ‌ಬೇಕು. ಶವ‌ ಇರುವ ಜಾಗದಲ್ಲೇ 10 ಜನರನ್ನು ಕರೆದುಕೊಂಡು ಬರಬಹುದು ಎಂದು ಹೇಳಿದ್ದಾರೆ.

ನವೀನ್​ ಪೋಷಕರಿಗೆ ಗಣ್ಯರು ಸಾಂತ್ವನ ಹೇಳುತ್ತಿದ್ದಾರೆ. ಆದರೆ, ಶಾಸಕ ಬೆಲ್ಲದ್ ನೀಡಿರೋ ಬೇಜವಾಬ್ದಾರಿ ಹೇಳಿಕೆ ನವೀನ್​ ಪೋಷಕರನ್ನ ಮತ್ತಷ್ಟು ಕುಗ್ಗಿ ಹೋಗುವಂತೆ ಮಾಡಿದೆ.

Join Whatsapp