ಉಪ್ಪಿನಂಗಡಿ ಪ್ರತಿಭಟನೆ, ಲಾಠಿಚಾರ್ಜ್ ಪ್ರಕರಣ: ಮತ್ತೆ 10 ಮಂದಿಗೆ ಜಾಮೀನು

Prasthutha|

- Advertisement -

ಪುತ್ತೂರು: ಉಪ್ಪಿನಂಗಡಿ ಪ್ರತಿಭಟನೆ ಮತ್ತು ಲಾಠಿಚಾರ್ಜ್ ವೇಳೆ ದಾಖಲಾದ ಪ್ರಕರಣದಲ್ಲಿ ಬಂಧಿತರಾದ 10 ಮಂದಿ ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿದೆ.

ಕಾರಿಂಜದ ಮುಹಮ್ಮದ್ ತಾಹಿರ್, ಮಚ್ಚಿನ ನಿವಾಸಿ ಸಾದಿಕ್, ಬಂಟ್ವಾಳ ನಿವಾಸಿ ಅಬ್ದುಲ್ ಮುಬಾರಕ್, ಅಬ್ದುಲ್ , ಬಾರ್ಯ ನಿವಾಸಿ ಸಾಜಿರ್ ಮುಹಮ್ಮದ್ ಫೈಝಲ್, ಮುಹಮ್ಮದ್ ಹನೀಫ್, ನೆಕ್ಕಿಲಾಡಿ ನಿವಾಸಿ ಎನ್. ಖಾಸಿಂ, ಮುಹಮ್ಮದ್ ಆಸಿಫ್, ತೌಸೀಫ್ ಮುಹಮ್ಮದ್ ಸೇರಿ 10 ಮಂದಿಗೆ ಜಾಮೀನು ದೊರೆತಿದೆ.

- Advertisement -

ಕೊಲೆಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಪೊಲೀಸರು ವಿಚಾರಣೆಗಾಗಿ ಪಿಎಫ್ ಐ ಮುಖಂಡರನ್ನು ಕರೆದುಕೊಂಡು ಬಂದು, ಬಿಡುಗಡೆ ಮಾಡದಿದ್ದಾಗ ಪಿಎಫ್ ಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆಯ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ, ಪೊಲೀಸ್ ಠಾಣಾ ಕರ್ತವ್ಯದಲ್ಲಿದ್ದ ಪೊಲೀಸ್ ಉಪ ನಿರೀಕ್ಷಕಿ ಹಾಗೂ ಸಿಬ್ಬಂದಿಗಳ ಮೇಲೆ, ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಮಾನಭಂಗಕ್ಕೆ ಯತ್ನಿಸಿ, ಸಾರ್ವಜನಿಕ ಅಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಈ ಮೇಲಿನ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ನ್ಯಾಯಾಲಯ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ.

ಆರೋಪಿಗಳ ಪರ ನ್ಯಾಯವಾದಿಗಳಾದ ಅಶ್ರಫ್ ಕೆ.ಅಗ್ನಾಡಿ, ಮಜೀದ್ ಖಾನ್, ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದ್ದರು.

Join Whatsapp