ಸೌದಿಯಲ್ಲಿ ಮಹಿಳೆಯ ಮೇಲೆ ಹಿಂಸೆಗೆ 1 ವರ್ಷ ಜೈಲು, 50,000 ರಿಯಲ್ಸ್ ದಂಡ

Prasthutha: November 26, 2020

ರಿಯಾಧ್ : ಸೌದಿ ಅರೇಬಿಯಾದಲ್ಲಿ ಮಹಿಳೆಯರ ವಿರುದ್ಧದ ಎಲ್ಲಾ ರೀತಿಯ ಹಿಂಸೆಗಳಿಗೆ 1 ವರ್ಷ ಜೈಲು ಮತ್ತು 50,000 ರಿಯಲ್ಸ್ ದಂಡ ವಿಧಿಸುವ ಎಚ್ಚರಿಕೆಯನ್ನು ಅಲ್ಲಿನ ಪಬ್ಲಿಕ್ ಪ್ರಾಸಿಕ್ಯೂಶನ್ ನೀಡಿದೆ.

ಮಹಿಳೆಯರ ವಿರುದ್ಧದ ದೈಹಿಕ, ಮಾನಸಿಕ ಅಥವಾ ಲೈಂಗಿಕ ಕಿರುಕುಳ ಅಥವಾ ಆ ರೀತಿಯ ಬೆದರಿಕೆ ಸೇರಿದಂತೆ ಎಲ್ಲಾ ಹಿಂಸೆಗಳ ವಿರುದ್ಧವೂ ಈ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಪರಾಧಿಗಳು 1 ತಿಂಗಳು ಕಡಿಮೆಯಿಲ್ಲದಂತೆ ಮತ್ತು ಗರಿಷ್ಠ 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಕನಿಷ್ಠ 5,000 ಮತ್ತು ಗರಿಷ್ಠ 50,000 ರಿಯಲ್ಸ್ ದಂಡ ವಿಧಿಸಲಾಗುತ್ತದೆ. ಪದೇಪದೇ ಮಾಡಿದ ಅಪರಾಧಕ್ಕೆ ದಂಡ ದ್ವಿಗುಣಗೊಳಿಸಲಾಗುತ್ತದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ