ಕೋವಿಡ್ ಲಸಿಕಾ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ: ಅರ್ಜಿದಾರನಿಗೆ 1 ಲಕ್ಷ ರೂ.ದಂಡ

Prasthutha|

ತಿರುವನಂತಪುರಂ: ಕೋವಿಡ್ – 19 ಲಸಿಕಾ ಪ್ರಮಾಣಪತ್ರದಿಂದ ಪ್ರಧಾನಿ ಮೋದಿಯ ಭಾವಚಿತ್ರವನ್ನು ತೆಗೆದು ಹಾಕಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಇಂದು ವಜಾಗೊಳಿಸಿದೆ.

- Advertisement -

ಮಾತ್ರವಲ್ಲ ಈ ಪ್ರಕರಣ ಕ್ಷುಲ್ಲಕ, ರಾಜಕೀಯ ಪ್ರೇರಿತ ಮತ್ತು ಸಾರ್ವಜನಿಕ ಹಿತಾಸಕ್ತಿ ದಾವೆ ಅಲ್ಲ ಎಂದು ಪರಿಗಣಿಸಿರುವ ಕೇರಳ ಹೈಕೋರ್ಟ್, ಅರ್ಜಿದಾರನಿಗೆ ಒಂದು ಲಕ್ಷ ರೂ.ದಂಡ ವಿಧಿಸಿ ಆದೇಶ ನೀಡಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಜನರು ಲಸಿಕೆಗಾಗಿ ಹಣ ಪಾವತಿಸಬೇಕಾದಾಗ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿಯವರ ಚಿತ್ರ ಇರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತ ಪೀಟರ್ ಮೈಲಿಪರಂಪಿಲ್ ಕೇರಳ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

- Advertisement -

ಪ್ರಧಾನಿಯನ್ನು ಕಾಂಗ್ರೆಸ್ ಪ್ರಧಾನಿ ಅಥವಾ ಬಿಜೆಪಿ ಪ್ರಧಾನಿ ಅಥವಾ ಯಾವುದೇ ರಾಜಕೀಯ ಪ್ರಧಾನಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಸಂವಿಧಾನದ ಪ್ರಕಾರ ಪ್ರಧಾನಿಯಾಗಿ ಆಯ್ಕೆಯಾದರೆ ಆತ ದೇಶದ ಪ್ರಧಾನಿ. ಪ್ರತಿಯೊಬ್ಬರೂ ಆತನನ್ನು ಪ್ರಧಾನಿಯಾಗಿ ಒಪ್ಪಿಕೊಳ್ಳಬೇಕೆಂದು ನ್ಯಾಯಾಮೂರ್ತಿ ಪಿ.ವಿ. ಕುಂಞಿಕೃಷ್ಣನ್, ತನ್ನ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಸರ್ಕಾರದ ನೀತಿ ಮತ್ತು ಪ್ರಧಾನಿಯ ರಾಜಕೀಯ ನಿಲುವು ವಿಭಿನ್ನವಾಗಿರಬಹುದು. ಆದರೆ ನೈತಿಕತೆಯನ್ನು ಹೆಚ್ಚಿಸುವ ಸಂದೇಶದೊಂದಿಗೆ ಪ್ರಧಾನ ಮಂತ್ರಿಯ ಭಾವಚಿತ್ರದೊಂದಿಗೆ ಲಸಿಕೆ ಪ್ರಮಾಣ ಪತ್ರವನ್ನು ಸಾಂಕ್ರಾಮಿಕ ಪರಿಸ್ಥಿತಿ ಕೊಂಡೊಯ್ಯಲು ನಾಗರಿಕರು ನಾಚಿಕೆಪಡಬೇಕಾಗಿಲ್ಲ ಎಂದು ನ್ಯಾಯಮೂರ್ತಿ ತಿಳಿಸಿದರು.

ಈ ನಿಟ್ಟಿನಲ್ಲಿ ಅರ್ಜಿದಾರರು 1 ಲಕ್ಷ ದಂಡವನ್ನು ಆರು ವಾರಗಳಲ್ಲಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಲ್‌ಎಸ್‌ಎ) ಕ್ಕೆ ಠೇವಣಿ ಮಾಡಬೇಕಾಗುತ್ತದೆ. ಇದಕ್ಕೆ ವಿಫಲವಾದರೆ ಅವರ ಆಸ್ತಿಯನ್ನು ಜಪ್ತಿ ಮಾಡುವ ಮೂಲಕ ಮೊತ್ತವನ್ನು ಪಡೆಯಲಾಗುವುದೆಂದು ನ್ಯಾಯಾಲಯ ಹೇಳಿದೆ.

Join Whatsapp