2020 ರಲ್ಲಿ ಅಪಘಾತಗಳಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 1.20 ಲಕ್ಷ; ದಿನಕ್ಕೆ ಸರಾಸರಿ 328 ಸಾವುಗಳು!

Prasthutha|

ಹೊಸದಿಲ್ಲಿ: ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 1.20 ಲಕ್ಷ. ಪ್ರತಿ ದಿನ ಸರಾಸರಿ 328 ಜನರು ವಿವಿಧ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

- Advertisement -

ಕಳೆದ ಮೂರು ವರ್ಷಗಳಲ್ಲಿ 3.92 ಲಕ್ಷ ಜನರು ವಿವಿಧ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ವರದಿ ಮಾಡಿದೆ. 2019 ರಲ್ಲಿ 1.36 ಲಕ್ಷ ಜನರು, 2018 ರಲ್ಲಿ 1.35 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

2020ರಲ್ಲಿ 41,196 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 47,504, 2018 ರಲ್ಲಿ47,028 ಪ್ರಕರಣಗಳು ದಾಖಲಾಗಿತ್ತು. ಮೂರು ವರ್ಷಗಳಲ್ಲಿ ದಿನಕ್ಕೆ ಸರಾಸರಿ 112 ರಸ್ತೆ ಅಪಘಾತಗಳ ಪ್ರಕರಣ ದಾಖಲಾಗಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ.

- Advertisement -

2022ರಲ್ಲಿ ದೇಶದಲ್ಲಿ 52 ಜನರು ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದು, 2019ರಲ್ಲಿ 55 ಮಂದಿ ಹಾಗೂ 2018 ರಲ್ಲಿ 35 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತ ಸಾವುಗಳು ಆತಂಕಕಾರಿ ಎಂದು ತಜ್ಞರು ಹೇಳುತ್ತಾರೆ.

Join Whatsapp