ಹಿಂದುತ್ವ ಸಂಘಟನೆಗಳು ನಡೆಸುತ್ತಿರುವ ದ್ವೇಷ ರಾಜಕೀಯವನ್ನು ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂಬಂಧಿ ಮೀನಾ ಹ್ಯಾರಿಸ್ ತೀವ್ರವಾಗಿ ಖಂಡಿಸಿದ್ದಾರೆ. ಹಿಂಸಾತ್ಮಕ ಹಿಂದೂ ತೀವ್ರವಾದದ ವಿರುದ್ಧ ಮಾತನಾಡುವ ಸಮಯ ಬಂದಿದೆ ಎಂದು ಮೀನಾ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.
ಅಮೆರಿಕದ ತೀವ್ರಗಾಮಿ ಕ್ರಿಶ್ಚಿಯನ್ ಸಂಘಟನೆಗಳ ಬಗ್ಗೆ ಮತ್ತು ಅವರು ಸೃಷ್ಟಿಸುತ್ತಿರುವ ಸಮಸ್ಯೆಗಳ ಬಗ್ಗೆ ಬರೆದ ಲೇಖನದ ಸ್ಕ್ರೀನ್ ಶಾಟ್‌ನೊಂದಿಗೆ ಮೀನಾ ಹಿಂದೂ ಉಗ್ರವಾದದ ವಿರುದ್ಧ ಟ್ವೀಟ್ ಮಾಡಿದ್ದಾರೆ. ‘ಹಿಂಸಾತ್ಮಕ ಕ್ರಿಶ್ಚಿಯನ್ ತೀವ್ರವಾದದ ವಿರುದ್ಧ ಮಾತನಾಡಬೇಕಾದ ಸಮಯ ಬಂದಿದೆ’ ಎಂದಾಗಿದೆ ಈ ಲೇಖನದ ಶೀರ್ಷಿಕೆ. ಕಳೆದ ಒಂದು ವಾರದಲ್ಲಿ ನಡೆದ ಘಟನೆಗಳನ್ನು ತೆಗೆದು ನೋಡಿದರೆ ಹಿಂಸಾತ್ಮಕ ಹಿಂದೂ ತೀವ್ರವಾದದ ವಿರುದ್ಧ ಮಾತನಾಡುವ ಸಮಯ ಬಂದಿದೆ ಎಂದು ಈ ಶೀರ್ಷಿಕೆ ಯನ್ನು ಬದಲಾಯಿಸಿ ಓದಬಹುದು. ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ ’ಎಂದು ಮೀನಾ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.