ಹರಿಯಾಣದ ಬಿಜೆಪಿ-ಜೆಜೆಪಿ ಮೈತ್ರಿಯಲ್ಲಿ ಬಿರುಕು?, ಪ್ರಧಾನಿಯನ್ನು ಭೇಟಿ ಮಾಡಿದ ಉಪಮುಖ್ಯಮಂತ್ರಿ

Prasthutha|

- Advertisement -

ಹರಿಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ನಿನ್ನೆ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಮತ್ತು ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದರು. ಕೃಷಿ ಕಾನೂನುಗಳ ಬಗ್ಗೆ ಬಿಜೆಪಿ-ಜೆಜೆಪಿ ಮೈತ್ರಿಯಲ್ಲಿ ಬಿರುಕು ಉಂಟಾಗಿದೆ ಎಂಬ ವದಂತಿಗಳ ಮಧ್ಯೆ ಈ ಸಭೆ ನಡೆದಿದೆ.

ತಮ್ಮ ಸರಕಾರ ದುರ್ಬಲವಾಗಿದೆ ಎಂಬ ವಾದವನ್ನು ದುಶ್ಯಂತ್ ಚೌಟಾಲ ತಿರಸ್ಕರಿಸಿದ್ದಾರೆ. “ಪ್ರತಿಪಕ್ಷಗಳು ಮತ್ತು ಮಾಧ್ಯಮಗಳ ಆರೋಪಗಳು ಆಧಾರರಹಿತವಾಗಿವೆ. ಸರಕಾರಕ್ಕೆ ಯಾವುದೇ ಬೆದರಿಕೆ ಇಲ್ಲ, ನಾವು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತೇವೆ” ಎಂದು ಚೌಟಾಲ ಪ್ರತಿಕ್ರಿಯಿಸಿದ್ದಾರೆ.

- Advertisement -

2019ರಲ್ಲಿ 40 ಸ್ಥಾನಗಳನ್ನು ಪಡೆದ ಬಿಜೆಪಿಯು 10 ಸ್ಥಾನಗಳನ್ನು ಪಡೆದ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 90 ಸದಸ್ಯರ ವಿದಾನಸಭೆಯಲ್ಲಿ ಬಹುಮತವನ್ನು ಗಳಿಸಿತ್ತು. ಜೆಜೆಪಿಗೆ ವಿವಾದಿತ ಕೃಷಿ ಕಾನೂನಿನಿಂದ ದೊಡ್ಡ ಹಿನ್ನಡೆಯಾಗುವ ಆತಂಕವಿದೆ.

Join Whatsapp