ಸಿಬಿಎಸ್‌ಇ ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟ.!

Prasthutha|

- Advertisement -

ಸಿಬಿಎಸ್‌ಇ ಹತ್ತನೇ ತರಗತಿ ಪರೀಕ್ಷೆ ಮೇ 4 ರಿಂದ ಜೂನ್ 11 ರವರೆಗೆ ನಡೆಯಲಿದೆ ಎಂದು ಸಿಬಿಎಸ್ಇ ತಿಳಿಸಿದೆ. Cbse.gov.in ವೆಬ್‌ಸೈಟ್ ಮೂಲಕ ಪರೀಕ್ಷೆಗಳ ವೇಳಾಪಟ್ಟಿಯನ್ನು ತಿಳಿಯಬಹುದು. ಹತ್ತು ಮತ್ತು ಹನ್ನೆರಡನೇ ತರಗತಿಗಳ ಪ್ರಾಯೋಗಿಕ ಪರೀಕ್ಷೆಗಳು ಮಾರ್ಚ್ 1 ರಿಂದ ಪ್ರಾರಂಭವಾಗಲಿವೆ. ಹತ್ತನೇ ತರಗತಿ ಪರೀಕ್ಷೆಗಳು ಮೇ 4 ರಿಂದ ಪ್ರಾರಂಭವಾಗಿ ಜೂನ್ 7 ಕ್ಕೆ ಕೊನೆಗೊಳ್ಳಲಿವೆ. ಹನ್ನೆರಡನೇ ತರಗತಿ ಪರೀಕ್ಷೆ ಮೇ 4 ರಿಂದ ಜೂನ್ 11 ರವರೆಗೆ ನಡೆಯಲಿದೆ.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದ್ದಾರೆ. ಪ್ರಮುಖ ವಿಷಯಗಳ ಪರೀಕ್ಷೆಗಳ ನಡುವೆ ಅಧ್ಯಯನ ಮಾಡಲು ಹೆಚ್ಚಿನ ದಿನಗಳು ಸಿಗಲಿದೆ. ಜುಲೈ 15 ರೊಳಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಅವರು ಹೇಳಿದ್ದಾರೆ.

Join Whatsapp