ಯುಎಪಿಎ ಪ್ರಕರಣದಲ್ಲೂ ವಿಚಾರಣೆ ವಿಳಂಬವಾದರೆ ಜಾಮೀನು ನೀಡಬಹುದು : ಸುಪ್ರೀಂ ಕೋರ್ಟ್

Prasthutha|

- Advertisement -

ಹೊಸದಿಲ್ಲಿ: ಯುಎಪಿಎ ಪ್ರಕರಣದಲ್ಲೂ ವಿಚಾರಣೆ ವಿಳಂಬವಾದರೆ ಜಾಮೀನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರವಾದಿಯನ್ನು ನಿಂದಿಸಿದ ಕಾಲೇಜು ಶಿಕ್ಷಕ ಟಿ.ಜೆ. ಜೋಸೆಫ್ ನ ಮೇಲೆ ದಾಳಿ ನಡೆಸಿದ ಪ್ರಕರಣದ ಆರೋಪಿಗೆ ಕೇರಳ ಹೈಕೋರ್ಟ್ ಜಾಮೀನು ನೀಡಿರುವುದರ ವಿರುದ್ಧ ಎನ್ಐಎ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುತ್ತಿದ್ದಾಗ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಜಾಮೀನು ವಿರುದ್ಧ ಎನ್‌ಐಎ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ವಜಾಗೊಳಿಸಿದೆ. ಯುಎಪಿಎ ದಾಖಲಿಸಲ್ಪಟ್ಟರೂ ಆರೋಪಿಗಳನ್ನು ವಿಚಾರಣೆ ಹೆಸರಿನಲ್ಲಿ ವರ್ಷಗಟ್ಟಲೆ ಜೈಲಿನಲ್ಲಿರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿಚಾರಣೆಯನ್ನು ವಿಳಂಬ ಮಾಡಿ ಜಾಮೀನು ನಿರಾಕರಿಸುವುದು ಆರೋಪಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಆರೋಪಿಗೆ ಜಾಮೀನು ನೀಡುವ ಕೇರಳ ಹೈಕೋರ್ಟ್‌ನ ತೀರ್ಪು ಸರಿಯಾಗಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರ ನ್ಯಾಯಪೀಠ ಹೇಳಿದೆ.

Join Whatsapp