ಸಲಿಂಗಕಾಮಿ ಬಿಜೆಪಿ ನಾಯಕನ ಬಂಧನ; ವಿಚಾರಣೆಯ ವೇಳೆ ಮತ್ತಷ್ಟು ಪ್ರಕರಣ ಬೆಳಕಿಗೆ

Prasthutha|

ಉತ್ತರ ಪ್ರದೇಶ ಬಿಜೆಪಿ ನಾಯಕ ರಾಮ್ ಬಿಹಾರಿ ರಾಥೋಡ್ ವಿರುದ್ಧ ಮತ್ತೆ ಮೂರು ಸಲಿಂಗಕಾಮ ಪ್ರಕರಣಗಳು ದಾಖಲಾಗಿವೆ.
ಎರಡು ದಿನಗಳ ಹಿಂದೆ ನಿವೃತ್ತ ಕಂದಾಯ ಅಧಿಕಾರಿಯೂ ಆಗಿರುವ ಮಾಜಿ ಬಿಜೆಪಿ ನಗರ ಉಪಾಧ್ಯಕ್ಷ ರಾಮ್ ಬಿಹಾರಿ ವಿರುದ್ಧ ಇಬ್ಬರು ಅಪ್ರಾಪ್ತ ಬಾಲಕರ ಪೋಷಕರು ಸಲಿಂಗಕಾಮದ ದೂರು ನೀಡಿದ ಬಳಿಕ ಆತನನ್ನು ಬಂಧಿಸಲಾಗಿತ್ತು.
ಗುರುವಾರ ನಡೆದ ವಿಚಾರಣೆಯ ವೇಳೆ ಮತ್ತೆ ಮೂರು ಇದೇ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿವೆ. ಆತನ ಮನೆಯ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡ ಲ್ಯಾಪ್ ಟಾಪ್, ಡಿವಿಆರ್, ಹಾರ್ಡ್ ಡಿಸ್ಕ್ ಗಳ ಪರಿಶೀಲನೆ ನಡೆಯುತ್ತಿದ್ದು, ಇನ್ನೂ ಹಲವು ಸಲಿಂಗಕಾಮದ ಪ್ರಕರಣಗಳು ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ತನ್ನ ಮನೆಯಲ್ಲಿ ಜೂಜಾಟ ಮತ್ತು ಬೆಟ್ಟಿಂಗ್ ಕೂಡ ನಡೆಸುತ್ತಿದ್ದ ಎನ್ನಲಾಗಿದೆ.
ಆರೋಪಿ ರಾಮ್ ಬಿಹಾರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸಂತ್ರಸ್ತ ಕುಟುಂಬ ಒತ್ತಾಯಿಸಿವೆ ಎಂದು ಜಲೌನ್ ಪೊಲೀಸ್ ವರಿಷ್ಠಾಧಿಕಾರಿ ಯಶ್ ವೀರ್ ಸಿಂಗ್ ತಿಳಿಸಿದ್ದಾರೆ.
ಬಾಲಕ ನನ್ನ ಮನೆಯಿಂದ ಡಿವಿಆರ್ ಕದ್ದಿದ್ದಾನೆ ಎಂದು ಆರೋಪಿಸಿ ಜನವರಿ 9ರಂದು ಅಪ್ರಾಪ್ತ ಬಾಲಕನೊಬ್ಬನ ವಿರುದ್ಧ ರಾಮ್ ಬಿಹಾರಿ, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಡಿವಿಡಿ ವೀಕ್ಷಿಸಿದಾಗ ಸಲಿಂಗಕಾಮದ ಪ್ರಕರಣ ಬೆಳಕಿಗೆ ಬಂದಿದೆ.
ರಾಮ್ ಬಿಹಾರಿಯನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಜಲೌನ್ ಬಿಜೆಪಿ ಮುಖಂಡರು ತಿಳಿಸಿದ್ದಾರೆ.

Join Whatsapp