ಶಾದಿಭಾಗ್ಯ ಯೋಜನೆ | 2,348 ಅರ್ಜಿಗಳ ವಿಲೇವಾರಿ ವಿಳಂಬ

Prasthutha|

ಮಂಗಳೂರು : ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಮಹತ್ವದ ಶಾದಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದನ್ನು ಆರಂಭದಿಂದಲೂ ವಿರೋಧಿಸಿಕೊಂಡು ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕಳೆದ ಮಾರ್ಚ್ ನಿಂದ ಈ ಯೋಜನೆಯನ್ನು ರದ್ದುಗೊಳಿಸಿದೆ. ಆದರೆ, ಯೋಜನೆ ರದ್ದತಿಗೂ ಮೊದಲು ನೀಡಲಾದ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ, ಸೂಕ್ತ ಮಾಹಿತಿಯೂ ಲಭ್ಯವಾಗದೆ ಅರ್ಜಿದಾರರು ಪರದಾಡುವಂತಾಗಿದೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ.6ಕ್ಕೂ ಮೊದಲು ಶಾದಿಭಾಗ್ಯ ಯೋಜನೆಯಲ್ಲಿ 2,638 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 290 ಅರ್ಜಿಗಳು ಅಸಮರ್ಪಕವಾಗಿವೆ ಎಂಬ ಕಾರಣ ನೀಡಿ ತಿರಸ್ಕರಿಸಲಾಗಿದೆ. ಉಳಿದ 2348 ಅರ್ಜಿಗಳನ್ನು ಪರಿಶೀಲಿಸಿ ಬೆಂಗಳೂರಿಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಅಲ್ಲಿ ಇದರ ಪರಿಶೀಲನೆ ನಡೆದು, ಅರ್ಜಿದಾರರಿಗೆ ಸರ್ಕಾರ ಬಿಡುಗಡೆಗೊಳಿಸಬೇಕಾದ ಮೊತ್ತವನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಕಳೆದ ಮಾ.6ರ ವರೆಗೆ ನೀಡಲಾದ ಅರ್ಜಿಗಳು ಮಾನ್ಯವಾಗಿವೆ. ದ.ಕ., ಕೊಡಗು ಸೇರಿದಂತೆ ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಅರ್ಜಿದಾರರಿಗೆ ಈಗಾಗಲೇ ಹಣ ಪಾವತಿಯಾಗಿದೆ. ಬಾಕಿಯುಳಿದಿರುವ ಮೂರು ಜಿಲ್ಲೆಗಳ ಫಲಾನುಭವಿಗಳಿಗೂ ಶಾದಿಭಾಗ್ಯದ ಅನುದಾನ ದೊರೆಯುವುದು ಖಚಿತ ಎಂದು ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

- Advertisement -

ಅಲ್ಪಸಂಖ್ಯಾತ ಇಲಾಖೆಯಲ್ಲಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿದ್ದುದರಿಂದ, ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿತ್ತು. ಹೀಗಾಗಿ ಅರ್ಜಿಗಳ ವಿಲೇವಾರಿಗೆ ವಿಳಂಬವಾಗಿದೆ. ಕೆಲವೇ ದಿನಗಳಲ್ಲಿ ಯೋಜನೆಯಡಿ ಹಿಂದಿನ ಸರ್ಕಾರ ನಿಗದಿ ಮಾಡಿದ ಮೊತ್ತ ಫಲಾನುಭವಿಗಳ ಖಾತೆಗೆ ಪಾವತಿಯಾಗಲಿದೆ ಎಂದು ಕಚೇರಿ ಮೂಲಗಳು ತಿಳಿಸಿವೆ.

Join Whatsapp