ವೃದ್ಧನ ಮೇಲೆ ಹಲ್ಲೆ ಪ್ರಕರಣ: ಎಸ್.ಪಿ.ಕಾರ್ಯಕರ್ತನ ವಿರುದ್ಧ ಎನ್ ಎಸ್ ಎ ದಾಖಲಿಸಲು ಪೊಲೀಸರ ಶಿಫಾರಸು

Prasthutha|

ನವದೆಹಲಿ: ಮುಸ್ಲಿಮ್ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಲು ಗಾಜಿಯಾಬಾದ್ ಪೊಲೀಸರು ಶಿಫಾರಸು ಮಾಡಿದ್ದಾರೆ.

- Advertisement -


ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ ನಂತರ ಸಮಾಜವಾದಿ ಪಕ್ಷದ ಕಾರ್ಯಕರ್ತ ಉಮೈದ್ ಪೆಹೆಲ್ವಾನ್ ಇದ್ರೀಸಿಯನ್ನು ಜೂನ್ 19 ರಂದು ಗಾಜಿಯಾಬಾದ್ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದರು.
ಇತ್ತೀಚೆಗೆ ಹಲ್ಲೆಗೊಳಗಾದ ವೃದ್ಧ ಅಬ್ದುಲ್ ಸಮದ್ ಸೈಫಿ ಅವರೊಂದಿಗೆ ಇದ್ರೀಸಿ ಫೇಸ್ಬುಕ್ ಲೈವ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಇದ್ರೀಸಿ “ಅನಗತ್ಯವಾಗಿ” ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.


ವೃದ್ಧನ ಮೇಲೆ ನಡೆಸಿದ ಹಲ್ಲೆ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿರಲಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿಕೊಂಡರೆ, ಸೈಫಿಯ ಕುಟುಂಬವು, ಹಿಂಸಾಚಾರದ ಸಂದರ್ಭದಲ್ಲಿ ಅವರು ಗೊಂದಲಕ್ಕೊಳಗಾಗಿದ್ದರು ಮತ್ತು ಇದನ್ನು ತನ್ನ ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ ಎಂದು ಹೇಳಿದೆ.

- Advertisement -


ಕ್ರೂರ ಎನ್ಎಸ್ಎ ಅಡಿಯಲ್ಲಿ ಒಮ್ಮೆ ಪ್ರಕರಣ ದಾಖಲಾದರೆ, ವಿಚಾರಣೆ ಇಲ್ಲದೆ ಒಂದು ವರ್ಷದವರೆಗೆ ಜೈಲಿನಲ್ಲಿಡಲಾಗುತ್ತದೆ.
“ನಾವು ಅವರ ವಿರುದ್ಧ (ಉತ್ತರ ಪ್ರದೇಶ ಸರ್ಕಾರಕ್ಕೆ) ಎನ್ಎಸ್ಎ ಶಿಫಾರಸು ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಔಪಚಾರಿಕ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ”ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಪಾಠಕ್ ಸೋಮವಾರ ತಿಳಿಸಿದ್ದಾರೆ.

Join Whatsapp