ವಿವಾಹ ನೊಂದಾವಣೆಗೆ ಬಹಿರಂಗ ನೋಟೀಸು ಅಗತ್ಯವಿಲ್ಲ : ಅಲಹಾಬಾದ್ ಹೈಕೋರ್ಟ್

Prasthutha|

- Advertisement -


ಮದುವೆಗೆ 30 ದಿನಗಳ ಮೊದಲು ಬಹಿರಂಗ ನೋಟೀಸು ಪ್ರಕಟಿಸಲು ಒತ್ತಾಯಿಸುವುದು ಅಸಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಅನ್ಯ ಧರ್ಮೀಯ ಯುವಕನನ್ನು ಮದುವೆಯಾಗಲು ಸಿದ್ದಳಾಗಿದ್ದ ಯುವತಿಯನ್ನು ಆಕೆಯ ಕುಟುಂಬ ಗೃಹ ಬಂಧನದಲ್ಲಿರಿಸಿದ್ದಾರೆಂದು ಆರೋಪಿಸಿ ಸಮರ್ಪಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್ ಈ ತೀರ್ಪನ್ನು ನೀಡಿದೆ. ಮೂವತ್ತು ದಿನಗಳ ಮುಂಚಿತವಾಗಿ ನೋಟಿಸ್ ಪ್ರಕಟಿಸಲು ಒತ್ತಾಯಿಸುವುದು ವ್ಯಕ್ತಿಯ ಗೌಪ್ಯತೆಯ ಮೇಲಿನ ಅತಿಕ್ರಮಣವಾಗಿದೆ ಎಂದು ನ್ಯಾಯಾಲಯ ಆರೋಪಿಸಿದೆ.

ವಿಶೇಷ ವಿವಾಹ ಕಾನೂನಿನ ಪ್ರಕಾರ ಮದುವೆಗೆ 30 ದಿನಗಳ ಮೊದಲು ವಧು-ವರರ ಫೋಟೋ ಮತ್ತು ವಿಳಾಸದೊಂದಿಗೆ ನೋಟಿಸನ್ನು ರಿಜಿಸ್ಟರ್ ಕಚೇರಿಯಲ್ಲಿ ಬಹಿರಂಗವಾಗಿ ಅಂಟಿಸಲಾಗುತ್ತದೆ. ಇದು ವ್ಯಕ್ತಿಗಳ ಗೌಪ್ಯತೆಯ ಮೇಲಿನ ಅತಿಕ್ರಮಣವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

- Advertisement -

ಮದುವೆಯಾಗಲು ಬಯಸುವವರು ಮೂವತ್ತು ದಿನಗಳ ಮುಂಚಿತವಾಗಿ ನೋಟೀಸನ್ನು ಬಹಿರಂಗವಾಗಿ ಪ್ರಕಟಿಸಲು ಬಯಸುತ್ತೀರಾ ಅಥವಾ ಇಲ್ಲವೇ ಎಂದು ತಿಳಿಸಿ ಮ್ಯಾರೇಜ್ ಆಫೀಸರ್ ಗೆ ನೋಟಿಸ್ ಕಳುಹಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಮದುವೆಯಾಗಲು ಬಯಸುವವರು ನೋಟೀಸು ಪ್ರಕಟಿಸಬಾರದೆಂದು ಕೇಳಿಕೊಂಡರೆ ವಿವಾಹ ರಿಜಿಸ್ಟ್ರಾರ್ ಬೇರೆ ಯಾವುದೇ ಅಡೆತಡೆಗಳನ್ನು ಸೃಷ್ಟಿಸದೆ ಮದುವೆ ನಡೆಸುವ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ಹೇಳಿದೆ.



Join Whatsapp