ಹಕ್ಕಿ ಜ್ವರ ಭೀತಿ; ರಾಜಧಾನಿ ದೆಹಲಿಯಲ್ಲಿ ಕೋಳಿ ಮಾಂಸ ಮಾರಾಟ ನಿಷೇಧ

Prasthutha|

ರಾಜಧಾನಿ ನವದೆಹಲಿಯಲ್ಲಿ ಸತ್ತ ಕಾಗೆಗಳು ಮತ್ತು ಬಾತುಕೋಳಿಗಳ ಮಾದರಿಗಳ ಪರೀಕ್ಷೆಯಲ್ಲಿ ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ಹೊರಗಿನಿಂದ ತರಲಾದ ಸಂಸ್ಕರಿಸಿದ ಮತ್ತು ಪ್ಯಾಕೇಜ್ ಮಾಡಿದ ಕೋಳಿ ಮಾಂಸ ಮಾರಾಟವನ್ನು ನಿಷೇಧಿಸಲು ದೆಹಲಿ ಸರ್ಕಾರ ಮುಂದಾಗಿದೆ.
ಹಕ್ಕಿ ಜ್ವರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಪೂರ್ವ ಮತ್ತು ದಕ್ಷಿಣ ಪಾಲಿಕೆಗಳು ಕೋಳಿ ಅಥವಾ ಸಂಸ್ಕರಿಸಿದ ಕೋಳಿ ಮಾಂಸ ಮಾರಾಟ ಮತ್ತು ಸಂಗ್ರಹಿಸಿಡುವುದನ್ನು ನಿಷೇಧಿಸಿವೆ.
ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ ಡಿಎಂಸಿ) ಕೋಳಿ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಪೂರ್ವ ಮತ್ತು ದಕ್ಷಿಣ ಪಾಲಿಕೆಗಳು ಈ ನಿರ್ಧಾರ ಕೈಗೊಂಡಿವೆ.
ಎನ್‌ ಡಿಎಂಸಿಯ ಪಶುವೈದ್ಯಕೀಯ ಸೇವಾ ಇಲಾಖೆ ಹೊರಡಿಸಿರುವ ಆದೇಶದಲ್ಲಿ, ಮೊಟ್ಟೆ ಆಧಾರಿತ ಭಕ್ಷ್ಯಗಳು ಅಥವಾ ಕೋಳಿ ಮಾಂಸ ಮತ್ತು ಇತರ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡಿದರೆ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

Join Whatsapp