ವಿವಾಹೇತರ ಲೈಂಗಿಕತೆ: ತೀರ್ಪು ಸೈನ್ಯಕ್ಕೆ ಅನ್ವಯಿಸದಂತೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ

Prasthutha|

- Advertisement -

ಹೊಸದಿಲ್ಲಿ:  ವಿವಾಹೇತರ ಲೈಂಗಿಕತೆಯನ್ನು ನ್ಯಾಯಸಮ್ಮತಗೊಳಿಸುವ 2018 ರ ಸುಪ್ರೀಂ ಕೋರ್ಟ್ ತೀರ್ಪು ಸೈನಿಕರಿಗೆ ಅನ್ವಯಿಸಬಾರದು ಎಂದು ಕೋರಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೇಂದ್ರದ ಕೋರಿಕೆಯ ಮೇರೆಗೆ ಸುಪ್ರೀಂ ಕೋರ್ಟ್ ನೋಟಿಸ್ ಕಳುಹಿಸಿದೆ. ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ನೇತೃತ್ವದ ನ್ಯಾಯಪೀಠವು ಈ ವಿಷಯವನ್ನು ಐದು ಸದಸ್ಯರ ಸಾಂವಿಧಾನಿಕ ಪೀಠದ ಮುಂದೆ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದೆ.

ಸಹೋದ್ಯೋಗಿಗಳ ಪತ್ನಿಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಸೈನಿಕರನ್ನು ವಜಾಗೊಳಿಸಲು ಅವಕಾಶ ಮಾಡಿಕೊಡಲು ಕೇಂದ್ರ ಸರಕಾರ ಕೇಳಿಕೊಂಡಿದೆ. ಆದರೆ ಅಂತಹ ಸಂಬಂಧಗಳಲ್ಲಿ ತೊಡಗಿಕೊಳ್ಳುವುದು ಸೈನಿಕರ ವರ್ತನೆಗೆ ಅನುಕೂಲಕರವಾದುದಲ್ಲ ಎಂಬುದು ಕೇಂದ್ರದ ಅಭಿಪ್ರಾಯ. ಆದರೆ, 2018 ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಅಂತಹ ಸಂಬಂಧಗಳಲ್ಲಿ ತೊಡಗಿಕೊಳ್ಳುವವರು ತಾವು ಯಾವುದೇ ಕ್ರಿಮಿನಲ್ ಅಪರಾಧ ಮಾಡಿಲ್ಲ ಎಂಬ ನಿಲುವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರವು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.



Join Whatsapp