ನವದೆಹಲಿ: ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ ಪಿ ನಡ್ಡಾ ಅವರು, ಮುಂಬರುವ ಲೋಕಸಭಾ ಚುನಾವಣೆವೆರೆಗೆ ಅಧ್ಯಕ್ಷೀಯ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ರಾಜ್ಯ ಘಟಕಗಳ ಚುನಾವಣೆ ಪ್ರಕ್ರಿಯೆ ನಿಗದಿತ ರಾಜ್ಯಗಳಲ್ಲಿ ಇನ್ನೂ ನಡೆಯದೇ ಇರುವ ಕಾರಣದಿಂದ ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿ ನಡ್ಡಾ ಅವರೇ ಮುಂದುವರೆಯಲಿದ್ದಾರೆ ಎನ್ನಲಾಗಿದೆ.
ಇದಲ್ಲದೆ, 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಬಿಜೆಪಿಯು ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದು, ರಾಷ್ಟ್ರೀಯ ಮಟ್ಟದಲ್ಲಿ ತನ್ನ ಶಕ್ತಿಯನ್ನು ಪ್ರಬಲಗೊಳಿಸುತ್ತಿದೆ. ಇದರ ಮುಂದಿನ ಭಾಗವಾಗಿ ಇಂತಹ ಬೆಳವಣಿಗೆಗಳು ಸಂಭವಿಸುತ್ತಿದೆ ಎಂಬ ಚರ್ಚೆಗಳೂ ಸಾರ್ವಜನಿಕ ವಲಯದಲ್ಲಿ ಆಗುತ್ತಿದೆ.