ರೈತರ ಟ್ರ್ಯಾಕ್ಟರ್ ಕ್ರಾಂತಿ : ಪಂಜಾಬ್ ನಿಂದ ದೆಹಲಿಗೆ ರಿವರ್ಸ್ ಗೇರ್ ನಲ್ಲಿ ಪ್ರಯಾಣಿಸಿದ ರೈತ

Prasthutha|

- Advertisement -

ಹೊಸದಿಲ್ಲಿ: ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ಪರೇಡಿನಲ್ಲಿ ಪಾಲ್ಗೊಳ್ಳಲು ರೈತನೊಬ್ಬ ರಿವರ್ಸ್ ಗೇರ್‌ನಲ್ಲಿ ಪಂಜಾಬ್‌ನಿಂದ ದೆಹಲಿಗೆ ಟ್ರ್ಯಾಕ್ಟರ್ ಓಡಿಸಿದ್ದಾನೆ. ಗುರು ಚರಣ್ ಸಿಂಗ್ ಎಂಬ ರೈತ ಪಂಜಾಬ್‌ನ ಬರ್ನಾಲಾದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದಾನೆ. ಅವರು ಐದು ದಿನಗಳಲ್ಲಿ 350 ಕಿ.ಮೀ. ಕ್ರಮಿಸಿದ್ದಾರೆ. “ನಾನು ಟ್ರ್ಯಾಕ್ಟರ್ ಚಾಲನೆ ಮಾಡುವಾಗ ಇತರ ಚಾಲಕರಿಗಿಂತ ಹೆಚ್ಚು ಗಮನ ಹರಿಸಬೇಕಾಗಿ ಬಂತು. ಪ್ರಯಾಣದಲ್ಲಿ ಅತೀ ಹೆಚ್ಚು ಡೀಸೆಲ್ ಖಾಲಿಯಾಯಿತು. ವಾಹನದ ಕ್ಲಚ್ ಮತ್ತು ಬ್ರೇಕ್‌ಗಳನ್ನು ಹೆಚ್ಚು ಬಾರಿ ಬಳಸಬೇಕಾಯಿತು. ಕುತ್ತಿಗೆ ಮತ್ತು ಕಾಲುಗಳು ನೋಯುತ್ತಿದೆ. ಆದರೆ ಅದೇನೂ ನನಗೆ ಸಮಸ್ಯೆಯಾಗಲಿಲ್ಲ. ಈ ರೀತಿ ಪ್ರಯಾಣಿಸುವ ಮೂಲಕ ಕಾನೂನನ್ನು ರದ್ದುಪಡಿಸಲು ನಾನು ಸರಕಾರಕ್ಕೆ ಸಂದೇಶ ನೀಡಲು ಬಯಸಿದ್ದೆ” ಎಂದು ಗುರುಚರಣ್ ಹೇಳಿದ್ದಾರೆ.

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ಪೆರೇಡ್ ನಡೆಸಲಿದ್ದಾರೆ. ರಾಜ್‌ಪಾತ್‌ನಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ರೈತರ ಪರೇಡ್ ನಡೆಯಲಿದೆ. ಪರೇಡ್ ಗಾಗಿ ಪಂಜಾಬ್ ಮತ್ತು ಹರಿಯಾಣದಿಂದ ಸಾವಿರಾರು ಟ್ರಾಕ್ಟರುಗಳು ದೆಹಲಿಗೆ ಬಂದಿವೆ.

- Advertisement -

ಭದ್ರತಾ ಮುನ್ನೆಚ್ಚರಿಕೆಗಳ ಭಾಗವಾಗಿ ಹೆಚ್ಚಿನ ಸ್ವಯಂಸೇವಕರನ್ನು ನಿಯೋಜಿಸುವುದಾಗಿ ರೈತ ಸಂಘಟನೆಯ ಮುಖಂಡರು ಹೇಳಿದ್ದಾರೆ. ಒಂದು ಟ್ರ್ಯಾಕ್ಟರ್‌ನಲ್ಲಿ ನಾಲ್ಕು ಜನರಿಗೆ ಪ್ರಯಾಣಿಸಬಹುದು. ಒಂದು ಲಕ್ಷ ಟ್ರಾಕ್ಟರುಗಳು ರಸ್ತೆಗೆ ಇಳಿಯುವ ನಿರೀಕ್ಷೆಯಿದೆ.



Join Whatsapp