ರಾಹುಲ್ ಗಾಂಧಿ ಕಛೇರಿ ಮೇಲೆ ದಾಳಿ ಪ್ರಕರಣ : 19 ಎಸ್ ಎಫ್ ಐ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

Prasthutha|

ವಯನಾಡ್: ಕೇರಳದ ವಯನಾಡಿನಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯ ಕಚೇರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ವಿದ್ಯಾರ್ಥಿ ಘಟಕ ಸಂಘಟನೆಯಾದ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ (ಎಸ್ಎಫ್ಐ) 19 ಕಾರ್ಯಕರ್ತರನ್ನು ಬಂಧಿಸಲಾಗಿದೆ.

- Advertisement -

ಸ್ಥಳೀಯ ನ್ಯಾಯಾಲಯವು ಬಂಧಿತ ಆರೋಪಿಗಳನ್ನು ಎರಡು ವಾರಗಳ ಕಾಲ ರಿಮಾಂಡ್ಗೆ ಒಪ್ಪಿಸಿದ್ದು, ಶನಿವಾರದಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕರ ಬಂಧನವಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದಲ್ಲದೆ ಈ ಪ್ರಕರಣವನ್ನು ಎಡಿಜಿಪಿ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗುವುದು ಎಂದೂ ಪೊಲೀಸರು ಹೇಳಿದ್ದಾರೆ.

- Advertisement -

ಬಿಜೆಪಿಯ ನೇತೃತ್ವದ ಕೇಂದ್ರ ಸರಕಾರವನ್ನು ಮೆಚ್ಚಿಸುವ ಸಲುವಾಗಿ ಎಸ್ ಎಫ್ ಐ ಗೂಂಡಾಗಳು ಈ ಧ್ವಂಸ ಕ್ರಿಯೆಯನ್ನು ಮಾಡಿದ್ದಾರೆ ಎಂದು ಯು ಡಿ ಎಫ್ ಆರೋಪಿಸಿದೆ.

Join Whatsapp