ಮುಟ್ಟುಗೋಲು ಹಾಕಿದ ಚಿನ್ನ ನಾಪತ್ತೆ : ಕಸ್ಟಮ್ಸ್ ಅಧಿಕಾರಿಗಳ ವಿರುದ್ಧವೇ ಸಿಬಿಐ ಎಫ್ ಐಆರ್

Prasthutha|

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಾಸ್ತಾನು ಕೇಂದ್ರದಲ್ಲಿ ಇರಿಸಲಾಗಿದ್ದ ಪ್ರಯಾಣಿಕರಿಂದ ವಶಪಡಿಸಲಾದ ಚಿನ್ನದಲ್ಲಿ 2.5 ಕೆ.ಜಿ. ಚಿನ್ನ ನಾಪತ್ತೆಯಾಗಿರುವ ಬಗ್ಗೆ ಆರು ಸಿಬ್ಬಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. 2012-14ರ ನಡುವೆ ವಿವಿಧ ಪ್ರಯಾಣಿಕರಿಂದ 2,594 ಗ್ರಾಂ ಚಿನ್ನ ವಶಪಡಿಸಿ, ದಾಸ್ತಾನು ಕೇಂದ್ರದಲ್ಲಿಡಲಾಗಿತ್ತು ಮತ್ತು ಆರೋಪಿಗಳು ಅದರ ಉಸ್ತುವಾರಿ ಹೊಂದಿದ್ದರು.

- Advertisement -

ಕಸ್ಟಮ್ಸ್ ಜಂಟಿ ಕಮೀಶನರ್ ಎಂ.ಜೆ. ಚೇತನ್ ದೂರಿನ ಆಧಾರದಲ್ಲಿ ಎಫ್ ಐಆರ್ ದಾಖಲಾಗಿದೆ. 13 ಪ್ರಕರಣಗಳಲ್ಲಿ ಚಿನ್ನ ಮುಟ್ಟುಗೋಲು ಹಾಕಿಕೊಂಡಿದ್ದು ಮತ್ತು ದಾಸ್ತಾನಿರಿಸಿದ್ದುದರಲ್ಲಿ ಇಲಾಖೆಯ ಸಿಬ್ಬಂದಿಯ ಪಾತ್ರವಿರುವ ಬಗ್ಗೆ ಆಂತರಿಕ ತನಿಖೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.

ಹಣಕಾಸು ಸಚಿವಾಲಯ (ತೆರಿಗೆ ಮತ್ತು ಕೇಂದ್ರ ಅಬಕಾರಿ) ಸಹಾಯಕ ಕಮೀಶನರ್ ಗಳಾದ ವಿನೋದ್ ಚಿನ್ನಪ್ಪ, ಕೆ. ಕೇಶವ್, ಕೇಂದ್ರ ತೆರಿಗೆ ಇಲಾಖೆಯ ವರಿಷ್ಠಾಧಿಕಾರಿಗಳಾದ ಕೆ.ಬಿ. ಲಿಂಗರಾಜು, ಡೀನ್ ರೆಕ್ಸ್, ರವಿಶೇಖರ್, ಮತ್ತು ಎಸ್.ಡಿ. ಹೀರೆಮಠ್ ಮುಂತಾದವರ ವಿರುದ್ಧ ಪ್ರಕರಣ ದಾಖಲಾಗಿದೆ.

Join Whatsapp